ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗ್ರಾಪಂ ಗೆ ಬಿಸ್ಕೇಟ್ ಬಾಕ್ಸ್ ಗಳು ಹಸ್ತಾಂತರ

ಹಳ್ಳೂರ : ಇಡೀ ದೇಶದಾದ್ಯಂತ ಕೊರೋನಾ ವೈರಸ್ ರೋಗದ ಹಿನ್ನಲೆ ಇಡೀ ಭಾರತ ದೇಶವೇ ಲಾಕ್‌ಡೌನ್ ಆಗಿದೆ. ಇಂದರಿಂದ ಬಡ ಜನರಿಗೆ ದಿನಸಿ ವಸ್ತುಗಳು ಸರಿಯಾಗಿ ಸಿಗದೆ ಇರುವ ಕಾರಣ ಕೆಲವು ಸಂಘ ಸಂಸ್ಥೆಗಳು ದಿನಸಿ ವಸ್ತುಗಳನ್ನು ಉಚಿತವಾಗಿ ಮನೆ ಮನೆಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಆದರೆ ಗ್ರಾಮದಲ್ಲಿ ಮಂಗಳವಾರ ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಭಿನ್ನ ರೀತಿಯಲ್ಲಿ ಹಂಚಿಕೆ ಮಾಡಿದ್ದಾರೆ
ಗ್ರಾಮದಲ್ಲಿ ರೈತ ಸಂಘದಿoದ ಬಡ ಮಕ್ಕಳ ಸಲುವಾಗಿ ಬಿಸ್ಕೇಟ್ ಬಾಕ್ಸ್ಗಳನ್ನು ಗ್ರಾಮದ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಿ ಗ್ರಾಪಂ ಮೂಲಕ ವಿತರಣೆ ಮಾಡಲು ತಿಳಿಸಿ ಮಾನವೀಯತೆ ಮೆರೆದಿದ್ದಾರೆ.
ಹೌದು ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಇಂದು ತುತ್ತು ಅನ್ನಕ್ಕಾಗಿ ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ ಈ ಮಹಾಮಾರಿ ಕೊರೋನಾ ವೈರಸ್‌ದಿಂದ ಬಡ ರೈತರಿಗೆ ಸಂಘ ಸಂಸ್ಥೆಗಳನ್ನು ಅನ್ನ ನೀಡುವ ರೈತನಿಗೆ ನಾವು ನಿಮ್ಮ ಬೆಂಬಲಕ್ಕೆ ಇದೇವೆ ಎಂದು ದಿನಸಿ ವಸ್ತುಗಳನ್ನು ನೀಡಿ ರೈತನ ಕಣ್ಣಿರು ಒರೆಸುವಂತ ಕೆಲಸ ಮಾಡಿದ್ದಾರೆ.
ಆದರೆ ಆ ಬಡ ಕುಟುಂಬದಲ್ಲಿ ಇರುವಂತ ಸಣ್ಣ ಸಣ್ಣ ಮಕ್ಕಳ ಗೋಳು ಕೇಳತ್ತಿರದು. ಯಾಕೆಂದರೆ ಆ ಪುಟ್ಟು ಕಂದಮ್ಮಗಳು ತಿನ್ನುವ ವಸ್ತುಗಳು ಸಿಗುತ್ತಿಲ್ಲ. ಆ ಪುಟ್ಟ ಕಂದಮ್ಮಗಳ ಸಲುವಾಗಿ ರೈತ ಸಂಘ ಬಡ ಮಕ್ಕಳಿಗೆ ಬಿಸ್ಕೇಟ್ ನೀಡಿವ ಮೂಲಕ ರೈತನಿಗೆ ತೊಂದರೆಯಾದರೆ ಎಲ್ಲ ರೈತರು ಒಗ್ಗಟ್ಟಾಗಿದೆವೆ ಎಂಬ ಸಂದೇಶ ರವಾನಿಸುವಂತೆ ಈ ರೈತ ಸಂಘ ಮಾಡಿದೆ.
ಈ ಸದಂರ್ಭದಲ್ಲಿ ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿಯ ನಿದೇರ್ಶಕ ಭೀಮಶಿ ಮಗದುಮ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ, ಬಸಪ್ಪ ಸಂತಿ, ರವಿ ನುಚ್ಚುಂಡಿ, ನಂದೇಪ್ಪ ನೆಸೂರ, ಹೊಳೆಪ್ಪ ಲೋಕನ್ನವರ, ಸಿದ್ದಲಿಂಗ ಗೌರಗೋಳ, ಲಕ್ಷ್ಮಣ ಹುಲ್ಯಾಳ, ಮುತ್ತಪ್ಪ ಅಂಗಡಿ, ಆನಂದ ಮೂಡಲಗಿ, ಹಣಮಂತ ಬೆಳಗಲಿ, ಲಕ್ಷ್ಮಣ ಸಪ್ತಸಾಗರ, ಮುತ್ತಪ್ಪ ತುಕ್ಕನ್ನವರ, ಅಪ್ಪೋಜಿ ಬೋಳನ್ನವರ, ಗಿರಮಲ್ಲ ನುಚ್ಚುಂಡಿ, ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.