ಶಿವಶಕ್ತಿ ಶುಗರ್ಸ, ಸೌಂದತ್ತಿ ಹಾಗೂ ಹಮ್ರ್ಸ ಡಿಸ್ಟಿಲರಿ ಪ್ರಾ. ಲಿ. ಯಡ್ರಾಂವ ಜಂಟಿಯಾಗಿ ಉಚಿತ ಹ್ಯಾಂಡ್ ಸೆನಿಟೈಜರ ವಿತರಣೆ

ಚಿಕ್ಕೋಡಿ:- ಜಗತ್ತಿನಾದ್ಯಂತ ಕರೋನಾ (ಕೋವಿಡ್-19) ಮಹಾಮಾರಿ ರೋಗವು ಹರಡುತ್ತಿದ್ದು, ಕರೋನಾ ರೋಗವನ್ನು ಹೊಡೆದೋಡಿಸಲು ಬೇಕಾಗಿರುವ ಹ್ಯಾಂಡ್ ಸ್ಯಾನಿಟೈಜರ್‍ನ್ನು ಶಿವಶಕ್ತಿ ಶುಗರ್ಸ, ಸೌಂದತ್ತಿ ಕಾರ್ಖಾನೆಯ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಡಾ|| ಪ್ರಭಾಕರ ಕೋರೆಯವರ ನಿರ್ದೇಶನ ಹಾಗೂ ಹಮ್ರ್ಸ ಡಿಸ್ಟಿಲರಿ ಪ್ರಾ. ಲಿ. ಯಡ್ರಾಂವದ ಅಧ್ಯಕ್ಷರಾದ ಅಮಿತ ಕೋರೆ ಇವರು ಅಬಕಾರಿ ಇಲಾಖೆಯ ಸೂಚನೆಯ ಮೇರೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ 250 ಲೀ. ಹ್ಯಾಂಡ್ ಸ್ಯಾನಿಟೈಜರ್‍ನ್ನು ಉಚಿತವಾಗಿ ವಿತರಿಸಿದರು. ಇವರ ಈ ಕಾರ್ಯಕ್ಕೆ ಅಬಕಾರಿ ಇಲಾಖೆಯು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹಮ್ರ್ಸ ಡಿಸ್ಟಿಲರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿರುತ್ತಾರೆ. ಅಲ್ಲದೇ ನೆರೆಯ ಎಲ್ಲ ಗ್ರಾಮ ಪಂಚಾಯತಿ ಹಾಗೂ ತಾಲೂಕಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತ ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
Share