ಹಣ ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು : ಶಾಸಕ ಐಹೋಳೆ

ರಾಯಬಾಗ : ಕೊರೋನಾ ವೈರಸ್ ಪರಣಾಮ ಇಡೀ ದೇಶವೇ ಲಾಕ್‍ಡೌನ್‍ದಲ್ಲಿದೆ ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಸರಕಾರ ಜನರಿಗೆ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡುತ್ತಿದೆ ಆದರೆ ತಾಲೂಕಿನಲ್ಲಿ ಕೆಲವು ನ್ಯಾಯ ಬೆಲೆ ಅಂಗಡಿಯವರು ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಕೂಡಲೇ ಇದನ್ನು ನಿಲ್ಲಿಸಿಬೇಕು ಇಲ್ಲದಿದ್ದರೆ ಇಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಮಂಗಳವಾರ ತಾಲೂಕಿನ ಕಂಕಣವಾಡಿ ಹಾಗೂ ನಿಪನಾಳ ಗ್ರಾಮದಲ್ಲಿ ಕೊರೋನಾ ಜಾಗೃತಿ ಸಭೆಯಲ್ಲಿ ಮಾತನಾಡಿದರು. ನ್ಯಾಯಬೆಲೆ ಅಂಗಡಿಯವರು ಬಿಪಿಎಲ್ ಪಡಿತದಾರರಿಂದ ಹಣ ಪಡೆಯದೆ ಉಚಿತವಾಗಿ ಪಡಿತರ ಧಾನ್ಯವನ್ನು ವಿತರಿಸಬೇಕೆಂದು ಹೇಳಿದರು. ಕೊರೋನಾ ಮಹಾಮಾರಿ ರೋಗವನ್ನು ನಿಯಂತ್ರಣದಲ್ಲಿಡಲು ಆಯಾ ಗ್ರಾಮದವರು ತಮ್ಮ ಗ್ರಾಮಕ್ಕೆ ಬೇರೆಯಾರು ಬರದಂತೆ ಹಾಗೂ ಗ್ರಾಮದವರು ಬೇರೆಕಡೆಗೆ ಹೋಗದಂತೆ ಎಚ್ಚರವಹಿಸಿ ಗ್ರಾಮಸ್ಥರೆ ಪೋಲೀಸ್‍ರಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದ ಅವರು ರೈತರು ತಾವು ಬೆಳೆದ ಬೆಳೆಯನ್ನು ಬೇರೆ ಕಡೆಗೆ ಸಾಗಿಸಲು ಸಂಬಂಧಿಸಿದ ಅಧಿಕಾರಿಗಳಿಂದ ಪಾಸ್ ಕೋಡಿಸುವ ಅನುಕೂಲ ಮಾಡಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕಧಿಕಾರಿ ಪ್ರಕಾಶ ವಡ್ಡರ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಅರ್ಜುನ ನಾಯಿಕವಾಡಿ, ಲಕ್ಷ್ಮೀಕಾಂತ ದೇಸಾಯಿ, ಮೋಹನ ದೇಸಾಯಿ, ಮಹಾದೇವ ಗದಾಡೆ, ಸುದೀಪ ಚೌಗಲಾ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ನಿಪನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಶೀಲಾ ಮೇಗಾಡೆ, ಮುಖ್ಯಾಧಿಕಾರಿ ಖಿಲಾರೆ, ಪಿಡಿಓ ವಾಯ್.ಎಸ್.ಪಾಟೀಲ ಸೇರಿದಂತೆ ಅನೇಕರು ಇದ್ದರು.
Share