ರಾಯಬಾಗ ಪಟ್ಟಣದ ಮುಸ್ಲಿಂಸಮಾಜ ಭಾಂದವರಿಂದ ಕಡುಬಡವರಿಗೆ ಜೀವನಾವಶ್ಯಕ ವಸ್ತುಗಳ ಕೀಟ್ ವಿತರಣೆ

ರಾಯಬಾಗ : ರಾಯಬಗ ಪಟ್ಟಣದ ಮುಸ್ಲಿಂ ಸಮಜ ಭಾಂದವರು ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕಿಡಾದ ಪಟ್ಟಣದ ಬಡ ಜನರಿಗೆ ಬುಧವಾರ ಉಚಿತ ಜೀವನಾವಶ್ಯಕ ವಸ್ತುಗಳ ಕೀಟ್‌ನ್ನು ನೀಡಿದರು.
ರಾಯಬಾಗ ತಹಶೀಲ್ದಾರ ಚಂದ್ರಕಾAತ ಭಜಂತ್ರಿ ಅವರು ಕೀಟ್‌ಗಳನ್ನು ವಿತರಿಸುವುದರ ಮೂಲಕ ಚಾಲನೆ ನೀಡಿದರು. ಕೊರೋನಾ ಹಿನ್ನಲೆಯಲ್ಲಿ ಲಾಕಡೌನ್ ಇರುವುದರಿಂದ ಬಡವರು, ನಿರ್ಗತಿಕರು ಸೇರಿದಂತೆ ಹಲವಾರು ಬಡಜನರಿಗೆ ತುಂಬಾನೆ ತೊಂದರೆಯಾಗಿದೆ ಇದನ್ನು ಮನಗಂಡು ಪಟ್ಟಣದ ಮುಸ್ಲಿಂ ಸಮಾಜ ಭಾಂದವರು ಸುಮಾರು 250 ಕುಟುಂಬಳಿಗೆ ಉಚಿತ ಜೀವನಾವಶ್ಯಕ ವಸ್ತುಗಳ ಕೀಟ್‌ನ್ನು ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಹಾಜಿ ಮುಲ್ಲಾ ಮಾತನಾಡಿ ಕೊರೋನಾ ವೈರಸ್‌ದಿಂದ ದೇಶಾದ್ಯಂತ ಲಾಕ್‌ಡೌನ್ ಇದ್ದುದ್ದರಿಂದ ಕಡುಬಡುವರು ಜೀವನ ನಡೆಸುವುದೇ ದುಸ್ಥರವಾಗಿದೆ ಹೀಗಾಗಿ ನಮ್ಮ ಸಮಾಜ ಭಾಂದವರು ಹಿಟ್ಟು, ಬೇಳೆ, ಎಣ್ಣೆ ಸೇರಿದಂತೆ ಅನೇಕ ವಸ್ತುಗಳನ್ನೋಳಗೊಂಡ ಕೀಟ್‌ಗಳನ್ನು ಪಟ್ಟಣದಲ್ಲಿರುವ ಎಲ್ಲಾ ಸಮಾಜದ ಕಡುಬಡುವರಿಗೆ ನೀಡುತ್ತಿದ್ದೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಹಾಜಿ ಮುಲ್ಲಾ, ಫಾರುಖ ಮೋಮಿನ, ಅಯುಬ್ ಮುಲ್ಲಾ, ಯೂನುಸ್ ಅತ್ತಾರ, ಮೌಲಾನಾ ಅಜಿಂ, ಮೌಲಾನಾ ಆರೀಫ್, ಜುಬೇರ ಮೋಮಿನ, ಕಾಶಿಮ ಮುಲ್ಲಾ, ಮುಸ್ತಾಕ ಮುಲ್ಲಾ, ರಶೀದ ಪಠಾಣ, ಶಫೀವುಲ್ಲಾ ಗೊಲಂದಾಜ, ಸಲಾವುದ್ದಿನ ಮುಲ್ಲಾ, ಆದಂ ಪಠಾಣ, ಇರ್ಷಾದ ಮುಲ್ಲಾ, ಜುಬೇರ ಮೆಸ್ತಿç, ಸೇರಿದಂತೆ ಅನೇಕರು ಇದ್ದರು.
Share