ದೇವರ ಹೆಸರಿನಲ್ಲಿ ಮನೆಯಿಂದ ಹೊರಗೆ ಬಂದರೆ ಹುಶಾರ್…!ಪಿ.ಎಸ್.ಐ ಎಚ್.ಕೆ ನರಳೆ

ಕುಲಗೋಡ:
ಎಪ್ರೀಲ 12 ರಂದು ನಡೆಯುವ ರಥೋತ್ಸವದ ಹಾಗೂ ದೇವರ ಜಾತ್ರೆಯ ಹೆಸರಿನಲ್ಲಿ ಮನೆಯಿಂದ ಹೋರ ಬಂದರೆ ಕೇಸ್ ದಾಖಲಿಸಲಾಗುವದು. ಇದೆ 12 ರಂದು ಸಂಜೆ ನಡೆಯಬೇಕಿದ್ದ ಜಡಿಸಿದ್ದೇಶ್ವರ ಯೋಗೆಂದ್ರರ ಹಗ್ಗವಿಲ್ಲದ ರಥೋತ್ಸವ ರದ್ದು ಪಡಿಸಲಾಗಿದ್ದು ಎಂದು ಕುಲಗೋಡ ಠಾಣೆಯ ಪಿ.ಎಸ್.ಐ ಎಚ್.ಕೆ ನರಳೆ ಹೇಳಿದರು.
ಇವರು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಇಂದು ಮುಂಜಾನೆ ಹಮ್ಮಿಕೊಳ್ಳಲಾದ ಪ್ರಮುಖರ ಸಭೆಯಲ್ಲಿ ಮಾತನಾಡಿ 5 ಕಿಂತ ಹೆಚ್ಚು ಜನರು ಸೇರುವಂತಿಲ್ಲಾ, ಗ್ರಾಮದ ಹೋರಗಿನಿಂದ ಬರುವವರಿಗೆ ಹಾಗೂ ಗ್ರಾಮಸ್ಥರಿಗೆ ಶ್ರೀಮಠಕ್ಕೆ ಬರುವದನ್ನು ನಿಷೆದಿಸಿದೆ, ಶ್ರೀಮಠಕ್ಕೆ ದೇವರ ನೈವೆದೆ, ಕಾಯಿ ಕರ್ಪೂರ, ಉರಳು ಸೇವೆ, ಅಭೀಷೇಕ, ಹೋಮಹವನ, ಹಾಗೂ ಇತರೆ ಕೇಲಸಗಳಿಗೆ ಗ್ರಾಮಸ್ಥರು ಮಠಕ್ಕೆ ಬರುವಂತಿಲ್ಲಾ ಹಾಗೂ ಗ್ರಾಮದ 4 ಬದಿಯಲ್ಲಿ ಪೊಲೀಸ ಬಂದುಬಸ್ತ ಮಾಡಲಾಗೂವದು, ಸಂಪೂರ್ಣ ಧಾರ್ಮಿಕ ಕಾರ್ಯಗಳನ್ನು ನಿಷೇದಿಸಿದ್ದು ಗ್ರಾಮಸ್ಥರು ಹಾಗೂ ಜಿಲ್ಲೆ,ರಾಜ್ಯಗಳಿಂದ ಆಗಮಿಸುವ ಭಕ್ತರು ಜಾತ್ರಾ ಕಮಿಟಿ ಇಲಾಖೆಗೆ ಸಹಕರಿಸಬೇಕು, ಜಾತ್ರಾ ಕಮೀಟಿ ಹಾಗೂ ಗ್ರಾಮ ಪಂಚಾಯತ ಸಹಕರಿಸಬೇಕು ಎಂದರು.
ಸಭೆಯಲ್ಲಿ ಶ್ರೀ ಜಡಿಸಿದ್ದೇಶ್ವರ ಮಠದ ಮ.ನಿ.ಪ್ರ.ಸ್ವ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ವಿಶ್ವವನ್ನು ಕಾಡುತ್ತಿರುವ ಕರೋನಾದಿಂದ ದೇಶ ಮುಕ್ತವಾಗಲು ಪ್ರತಿಯೊಬ್ಬರ ಸಹಕಾರ ಅತೀ ಅವಶ್ಯ, ಜನರ ಹಿತದೃಷ್ಟಿಯಿಂದ ಎಪ್ರೀಲ 12 ರಂದು ನಡೆಯುವ ಭವ್ಯ ರಥೋತ್ಸವ ರದ್ದು ಮಾಡಲಾಗಿದ್ದು ಬರುವ ವರ್ಷ ನಾವೇಲ್ಲರೂ ಅದ್ದೂರಿಯಿಂದ ಆಚರಿಸೋಣ ಶ್ರೀ ಮಠದಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳು ಸ್ಥಗಿತವಾಗಿವೆ. ಯಾರೋಬ್ಬರು ಬರುವದು ಬೇಡ ಎಂದರು.
ಸಭೆಯಲ್ಲಿ ಮ.ನಿ.ಪ್ರ.ಸ್ವ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳ, ಸಿ.ಎಸ್ ವಾಲಿ. ಶಿವಕುಮಾರ ಅಂಗಡಿ. ಭೀಮಪ್ಪ ಹೊಟ್ಟಿಹೋಳಿ. ಚಂದ್ರಶೇಖರ ಗಾಣಿಗೇರ. ರುದ್ರಪ್ಪ ಹಳಿಂಗಳಿ. ಮರುತಿ ನಾಯ್ಕ. ಮಲ್ಲಪ್ಪ ಡವಳೇಶ್ವರ.ಮುತ್ತು ಜಿಡ್ಡಿಮನಿ. ಪೊಲೀಸ ಠಾಣೆ ಸಿಬ್ಬಂದಿ ಮತ್ತಿತರರು ಇದ್ದರು.
Share