ಬಹುರೂಪಿ ಅಲೆಮಾರಿ ಜನಾಂಗಕಿಲ್ಲ ತುತ್ತು ಅನ್ನ. ಹಾಡುಹಾಡಿ ಹೊಟ್ಟೆ ತುಂಬಿಕೊಳ್ಳುತ್ತಿರುವ ಬದುಕು.

ವರದಿ :ಸಂಗಮೆಶ ಹಿರೇಮಠ.
ಮುಗಳಖೋಡ: ಬಹುರೂಪಿ ಅಲೆಮಾರಿ ಜನಾಂಗವು ಕಳೆದ 15 ದಿನಗಳಿಂದ ತುತ್ತು ಅನ್ನಕ್ಕಾಗಿ ಹಾತೊರೆಯುತಿದ್ದು ಹೊಟ್ಟೆ ತುಂಬಿಸಿಕೊಳ್ಳಲು ಹಾಡು ಹಾಡಿ ಹಸಿವಿನ ಬದುಕನ್ನು ಮುನ್ನುಕೂತ್ತಾ ಕಾಲ ಕಳೆಯುತ್ತಿರುವ ಇವರ ಬದುಕು ದಯನೀಯವಾಗಿದ್ದು, ಚಿಕ್ಕ ಮಕ್ಕಳು, ತುಂಬು ಗರ್ಭಿಣಿಯರು, ವಯೋವೃದ್ದರು ಹಸಿವಿನಿಂದ ಕಂಗಾಲಾಗಿದ್ದು ಅನ್ನದಾನಿ ಕೈಗಳನ್ನು ಎದುರು ನೊಡುತ್ತಿರುವ ಮುಗಳಖೋಡದ ಸಿದ್ದರಾಯನ ಮಡ್ಡಿಯಲ್ಲಿ ವಾಸವಾಗಿರುವ ಅಲೆಮಾರಿ ಕುಟುಂಬದ ಜನರು.
ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಯಾವುದೇ ಕೆಲಸ, ಸರಕು ಸಾಗಾಣಿಕೆ ಸ್ಥಗಿತವಾಗಿದ್ದು ಜೊತೆಗೆ ಮಾರುಕಟ್ಟೆಗೆ ಹೋಗಿ ದಿನಸಿ ಹಾಗೂ ತರಕಾರಿ ಮತ್ತು ಹಣ್ಣುಗಳನ್ನು ತರಲು ತೀರ್ವ ತೊಂದರೆ ಉಂಟಾಗಿದೆ. ತರಬೇಕೆಂದರೆ ನಾವು ಹಳ್ಳಿ ಹಳ್ಳಿಗೆ ಹೋಗಿ ಹಾಡುಹಾಡಿ ಬಂದAತ ಕಾಳು, ಹಣ, ವಸ್ತçಗಳನ್ನು ಪಡೆದು ಜೋಪಡಿಯಲ್ಲಿ ನಮ್ಮ ಜೀವನ ನಡೆಸುತ್ತಿದ್ದೆವೆ. ಮಳೆಯಾದರೆ ನಾವು ವಾಸಿಸುವುದಾದರು ಎಲ್ಲಿ.? ಪುರಸಭೆಯಾದರು ನಮಗೆ ಸೂರು ಕಲ್ಪಿಸಿಲ್ಲ.
ಈಗ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ನಮ್ಮ ಹಾಡು ಕೇಳುವವರಿಲ್ಲ, ಹೊರಹೋಗಲು ಅನುಕೂಲವಿಲ್ಲ ಹೀಗಾಗಿ ನಮ್ಮ ಬದುಕು ದಯನೀಯವಾಗಿದ್ದು ಚಿಕ್ಕ ಮಕ್ಕಳು ಹಸಿವಿನಿಂದ ಕಂಗಾಲಾಗುತ್ತಿದ್ದಾರೆ. ಕೆಲ ಕುಟುಂಬಗಳು ಬಿ.ಪಿ.ಎಲ್. ಕಾರ್ಡ ಹೊಂದಿದ್ದು ಅಕ್ಕಿ ಮಾತ್ರ ಲಭಿಸಿವೆ ಹಾಲು, ತರಕಾರಿ ಇಲ್ಲದೆ ಸಂಕಷ್ಟ ಅನುಭವಿಸುವಂತ್ತಾಗಿದೆ. ಸಿದ್ದರಾಯನ ಮಡ್ಡಿಯ ಎಲ್ಲ ಕುಟುಂಬಗಳು ಕೋಳಗೇರಿ (ಸ್ಲಂ) ಯಲ್ಲಿ ವಾಸಿಸುತ್ತಿದ್ದು ಮಠಾಧೀಶರು, ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಸಂಸದ ಅಣ್ಣಾಸಾಹೇಬ ಜೋಲ್ಲೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ ಮತ್ತು ಸದಸ್ಯರು ಹಸಿವಿನಿಂದ ಹಾತೊರೆಯುತ್ತಿರುವ ಬಡಕುಟುಂಬಗಳಿಗೆ ಹಾಲು, ತರಕಾರಿ, ಹಣ್ಣು, ಹಂಪಲ ದಿನಸಿ ವಸ್ತುಗಳನ್ನು ಹಾಗೂ ಸುರಕ್ಷೆತೆಗಾಗಿ ಕೀಟನಾಶಕ ಸಿಂಪಡಣೆ ಜೊತೆಗೆ ಮಾಸ್ಕ ಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಾಕ್ಷಲೈನ:
ಪೌರಾಣಿಕ ನಾಟಕಗಳಾದ ಕುರುಕ್ಷೇತ್ರ, ಮಹಾಭಾರತ, ರಾಮಾಯಣ, ಭಕ್ತಶಿರಿಯಾಳ, ಸತ್ಯಹರಿಶ್ಚಂದ್ರ ಹೀಗೆ ಹತ್ತು ಹಲವಾರು ಪಾತ್ರಾಭಿನಯವನ್ನು ಮಾಡುತ್ತಾ ಹಾಡು ಹಾಡಿ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಜನರನ್ನು ರಂಜಿಸಿ ಅವರು ನೀಡಿದ ಹಣ, ದವಸದಾನ್ಯ ಕಾಣಿಕೆ ರೂಪದಲ್ಲಿ ಪಡೆದು ಬದುಕು ಕಟ್ಟಿಕೊಳ್ಳುತ್ತಿದ್ದು ಇಂದು ಅದು ಸಾಧ್ಯವಿಲ್ಲ. ನಾವು ಬದುಕಲು ತಾಲೂಕು ಹಾಗೂ ಜಿಲ್ಲಾಡಳಿತ ನಮ್ಮ ನೆರವಿಗೆ ನಿಂತು ಹಸಿವನ್ನು ನಿಗಿಸಬೇಕು.
“ಬಾಳಪ್ಪ ಈರಪ್ಪ ಬಹುರೂಪಿ. ಬಹುರೂಪಿ ಜನಾಂಗದ ಮುಖಂಡರು.
ನಾನು ರಾಯಬಾಗ ತಹಶಿಲ್ದಾರ ಜೊತೆ ಚರ್ಚೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಮುಗಳಖೋಡ ಬಹುರೂಪಿ ಜನಾಂಗದ ಕುಟುಂಬಕ್ಕೆ ಅಗತ್ಯ ಅಹಾರ ವಸ್ತುಗಳನ್ನು ವಿತರಿಸಲು ಸೂಚಿಸಲಾಗಿದೆ”
ಪಿ. ರಾಜೀವ್ ಕುಡಚಿ ಶಾಸಕ
Share