ಏಪ್ರಿಲ್‌ 30 ರವರೆಗೆ ರಾಜ್ಯದಲ್ಲಿ ಲಾಕ್‌ ಡೌನ್‌ ಮುಂದುವರಿಕೆ -ಯಡಿಯೂರಪ್ಪ ಘೋಷಣೆ

ಮಾರಣಾಂತಿಕ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಾದ್ಯಂತ ಘೋಷಿಸಲಾಗಿದ್ದ ಲಾಕ್‌ ಡೌನ್‌ ಏಪ್ರಿಲ್‌ 14 ರಂದು ಅಂತ್ಯವಾಗುತ್ತಿದ್ದು, ಇದನ್ನು ಏಪ್ರಿಲ್‌ 30 ರವರೆಗೆ ವಿಸ್ತರಣೆ ಮಾಡಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಮಾಧ್ಯಮ ಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿಯವರ ಜೊತೆಗೆ ನಡೆಸಿದ ಸಭೆಯ ಮಾಹಿತಿ ಹಂಚಿಕೊಂಡ ಯಡಿಯೂರಪ್ಪನವರು, ಇನ್ನೂ 15 ದಿನಗಳ ಕಾಲ ಲಾಕ್‌ ಡೌನ್‌ ನಿಶ್ಚಿತವಾಗಿದ್ದು, ಆದರೆ ಈ ಕುರಿತ ಮಾರ್ಗಸೂಚಿಗಳನ್ನು ಇನ್ನೆರೆಡು ದಿನಗಳಲ್ಲಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
Share