ಚಿಕ್ಕೋಡಿ ಮತಕ್ಷೇತ್ರದ ವಿವಿಧ  ಗ್ರಾಮಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ.

ಚಿಕ್ಕೋಡಿ:-  ಲೋಕಸಭಾ ಕ್ಷೇತ್ರದ  ಸಂಚಾರ – ಜನಜಾಗ್ರತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ. ಅಣ್ಣಾಸಾಬ ಜೊಲ್ಲೆ ಮನವಿ 
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಲಿಕವಾಡ, ಸದಲಗಾ, ಜನವಾಡ, ಶಮನೆವಾಡಿ,ನೇಜ, ಶಿರಗಾ೦ವ ನಾಗರಾಳ, ಹಿರೇಕುಡಿ ನನದಿ ಗ್ರಾಮಗಳಿಗೆ ಭೇಟಿ ನೀಡಿ, ಇಲಾಖೆ ಅಧಿಕಾರಿಗಳು, ಪಂಚಾಯತ್ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೊಂದಿಗೆ ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಚರ್ಚಿಸಲಾಯಿತು ಹಾಗೂ ಮುನ್ನೆಚ್ಚರಿಗೆ ಕ್ರಮಗಳ ಕುರಿತು ಜನರಿಗೆ ತಿಳಿ ಹೇಳುವಂತೆ  ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆ ಯರಿಗೆ  ಚಿಕ್ಕೋಡಿ ತಹಶಿಲ್ದಾರ ಸುಭಾಷ ಸಂಪಗಾವಿ ತಿಳಿಸಿದರು.
 
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು, ಅಗತ್ಯ ವಸ್ತುಗಳನ್ನು ನಿಮ್ಮ ನಿಮ್ಮ ಮನೆಗಳ ಸಮೀಪ ಗಾಡಿಗಳ ಮೂಲಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ‌. ಅಗತ್ಯ ವಸ್ತುಗಳನ್ನು ಕೊಳ್ಳುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಆದಷ್ಟು ಮನೆಯಲ್ಲೇ ಇರಿ ಸುರಕ್ಷಿತವಾಗಿರಿ. ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಸಹಕರಿಸಲು ವಿನಂತಿಸಿ, ಕೊರೋನಾ ವಿರುದ್ಧ ಹೋರಾಟದಲ್ಲಿ ಅವರುಗಳ ಶ್ರಮವನ್ನು ಶ್ಲಾಘಿಸಿದರು.ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡಬೇಕು,ಕ್ವಾರಂಟೈನ್ ಇದ್ದವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು, ಕಿರಾಣಿ ಸಾಮಾನು, ತರಕಾರಿಗಳನ್ನು ಹೆಚ್ಚಿನ ಬೆಲೆಗೆ ಮಾರುತ್ತಿದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಕಾರ್ಯಕರ್ತೆಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ತಹಶೀಲ್ದಾರ ಶ್ರಿ ಸುಭಾಷ ಸಂಪಗಾವಿ, ಸದಲಗಾ ಪಿಎಸ್ಐ ಶ್ರಿ ಅನಿಲಕುಮಾರ ಕುಂಬಾರ, ಸದಲಗಾ ಪುರಸಭೆ ಮುಖ್ಯಾಧಿಕಾರಿ ಶ್ರಿ ವಿವೇಕ ಜೋಶಿ, ವೈದ್ಯಾಧಿಕಾರಿಗಳಾದ ಶ್ರೀ ಯಶೋಧಾ ಬಾಬಲೆ, ಗ್ರಾಮಲೆಕ್ಕಾಧಿಕಾರಿ ಶ್ರಿ ಎಮ. ಎ, ನಗರಾಳೆ,ಪುರಸಭೆ ಸದಸ್ಯರು, ಆಶಾ ಕಾಯ೯ಕತ೯ರು ಅ೦ಗಣವಾಡಿ ಕಾಯ೯ಕತ೯ರು,ಗಣ್ಯರು ಉಪಸ್ಥಿತರಿದ್ದರು
Share
WhatsApp
Follow by Email