ಸರಕಾರಿ ಮಹಾವಿದ್ಯಾಲಯದಲ್ಲಿ ಆನ್‌ಲೈನ್ ವರ್ಗಗಳು

ಮೂಡಲಗಿ : ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಎಂಬ ಮಾರಕ ವೈರಸ್ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಹಂತಹAತವಾಗಿ ಜಗತ್ತಿನ ತುಂಬೆಲ್ಲಾ ಹರಡುತ್ತಿರುವ ಈ ವೈರಸ್ ಸಾವಿರಾರು ಜನರನ್ನು ಈಗಾಗಲೇ ಬಲಿತೆಗೆದುಕೊಂಡಿದೆ. ಇದನ್ನು ತಡೆಗಟ್ಟುವದು ಸವಾಲಿನ ಕೆಲಸವಾಗಿದೆ. ಇದರಿಂದ ದೇಶದ ಎಲ್ಲ ರಂಗದಲ್ಲಿಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಶ ಈಗಾಗಲೇ 21 ದಿನಗಳ ಲಾಕಡೌನಗೆ ಒಳಗಾಗಿದೆ. ಇದಕ್ಕೆ ಶಿಕ್ಷಣ ಇಲಾಖೆಯೂ ಸಹ ಹೊರತಾಗಿಲ್ಲ. ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಗಳು ಸಹ ಸ್ಥಬ್ದಗೊಂಡಿವೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಮತ್ತು ಪಠ್ಯವನ್ನು ಪೂರ್ಣಗೊಳಿಸುವುದರ ಮೇಲೆ ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಯು.ಜಿ.ಸಿ. ಹಾಗೂ ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಮನೆಯಿಂದ ಉಪನ್ಯಾಸಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಲುಪುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದ್ದರು. ಅದರನ್ವಯ ಸ್ಥಳೀಯ ಶ್ರೀ ಶ್ರೀಪಾದಭೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ವರದಿ ಶಿವಬಸು.ಮೋರೆ
Share
WhatsApp
Follow by Email