ಕರೊನಾ ತಡೆಗೆ ಮುನ್ನೆಚ್ಚರಿಕೆ ವಹಿಸಿ-ಸಚಿವೆ ಶಶಿಕಲಾ ಜೋಲ್ಲೆ

ಚಿಕ್ಕೋಡಿ :-ಕೊರೋನಾ ವೈರಸ್ ನಿಯಂತ್ರಿಸಲು ಮುನ್ನೆಚ್ಚರಿಕೆ ಬಗ್ಗೆ ಅಧಿಕಾರಿಗಳಿದ ಶಶಿಕಲ್ಲಾ ಜೊಲ್ಲೆ ಮಾಹಿತಿ ಪಡೆದು
ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಎಲ್ಲ ಅಧಿಕಾರಿಗಳು ತೆಗೆದುಕೊಳಬೆಕಾದ ಮುಂಜಾಗ್ರತ ಕ್ರಮ ಕೈಗೊಂಡು,ಕರೊನಾ ತಡೆಗೆ ಮುನ್ನೆಚರಿಕೆ ವಹಿಸಿಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಎಂದು ಸಚಿವೆ ಶಶಿಕಲಾ ಜೋಲ್ಲೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ನಾನಾ ಗ್ರಾಮಗಳಲ್ಲಿ ಆಯೋಜಿಸಿದ ಅಧಿಕಾರಿಗಳ ಸಭೆಯಲ್ಲಿ ಸಚಿವೆ ಜೊಲ್ಲೆ ಮಾತನಾಡಿದರು.
ಆರೋಗ್ಯ ಇಲಾಖೆ ಅಧಿಕಾರಿಗಳು,ಕಂದಾಯ ಇಲಾಖೆ ಅಧಿಕಾರಿಗಳು,ಪ.ಪಂ ಅಧಿಕಾರಿಗಳು,ಪೋಲಿಸ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಹೆಚ್ಚಿನ ನಿಗಾ ವಹಿಸಿ ಕಾರ್ಯನಿರ್ವಹಿಸಬೇಕು.ಆಶಾ ಹಾಗೂ ಅಂಗಣವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸರ್ವೆ ಮಾಡುತ್ತಿದ್ದು ಅವರಿಗೆ ಜನರು ಸಹಕರಿಸಬೇಕು.ಕಬ್ಬು ಕಟಾವು,ಅಲೇಮಾರಿ ಅಥವಾ ವಲಸೆ ಬಂದ ಕಾರ್ಮಿಕರಿಗೆ ಉಚಿತವಾಗಿ ಆಹಾರಧಾನ್ಯ ವಿತರಿಸಬೇಕು.ಹೋಮಕ್ವಾರಂಟೈನನಲ್ಲಿದ್ದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ ದೈನಂದಿನ ಮಾಹಿತಿ ತಿಳಿಸಬೇಕು.ಹೇಚ್ಚಿನ ದರದಲ್ಲಿ ದಿನಸಿ ವಸ್ತುಗಳ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಂಡು ಅವರ ಲೈಸನ್ ರದ್ದು ಮಾಡಬೇಕು.ಪಟ್ಟಣದಲ್ಲಿ ಶಿಘ್ರವೇ ದ್ರಾವಣ ಸಿಂಪಡಣೆ ಸುರಂಗ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನಿಡಿದ್ದು,ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವೆ ಜೊಲ್ಲೆ ಸೂಚಿಸಿದರು.
ಅಲ್ಲದೆ ನೀರು ಸರಬರಾಜು,ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ ವಿತರಣೆ,ಫಾಗಿಂಗ,ರೇಶನ ಅಂಗಡಿಗಳಲ್ಲಿ ರೇಶನ ವಿತರಣೆ ಬಗ್ಗೆ ಮಾಹಿತಿ ಪಡೇದರು.,
ಸಭೆಯಲ್ಲಿ ತಹಶಿಲ್ದಾರ ಪ್ರಕಾಶ ಗಾಯಕವಾಡ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಉಳಾಗಡ್ಡೆ, ಸೇರಿದಂತೆ ಅಂಗಣವಾಡಿ,ಆಶಾ ಕಾರ್ಯಕರ್ತೆಯರು,ಪ.ಪಂ ಸಿಬ್ಬಂದಿ ಹಾಜರಿದ್ದರು.
Share