ಗ್ರಾಮೀಣ ಪ್ರದೇಶದ ಬಡ ಜನರ ನೆರವಿಗೆ ನಿಂತ ಹಿಂಡಲ್ಕೋ ಕಂಪನಿ

ಬೆಳಗಾವಿ : ಕೊರೋನಾ ಮಹಾಮಾರಿಗೆ ತತ್ತರಿಸಿ ಹೋಗಿರುವ ಗ್ರಾಮೀಣ ಪ್ರದೇಶದ ಬಡ, ಕೂಲಿಕಾರ್ಮಿಕರ ನೆರವಿಗೆ ಬೆಳಗಾವಿಯ ಹಿಂಡಲ್ಕೋ ಕಂಪನಿ ಧಾವಿಸಿದೆ.
ಇವತ್ತು ಬೆಳಗಾವಿ ತಾಲೂಕಿನ ಬಸವನಕೊಳ್ಳ ಗ್ರಾಮದ 500ಕ್ಕೂ ಹೆಚ್ಚು ಬಡ,ಕೂಲಿಕಾರ್ಮಿಕ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿ ಇರುವ ಕಿಟ್ ಗಳನ್ನ ವಿತರಿಸಿತು.
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕ ಅನೀಲ ಬೆನಕೆ,ಬೆಳಗಾವಿ ಹಿಂಡಲ್ಕೋ ಕಂಪನಿಯ ಯೂನಿಟ್ ಹೆಡ್ ಕೆ.ಕುಮಾರವೇಲು,ಕಂಪನಿಯ ಎಚ್ ಆರ್ ಹೆಡ್ ವಿಶ್ವಾಸ ಸಿಂಧೆ,ಸಿಎಸ್ ಆರ್ ಆಫೀಸರ್ ರವಿ ಬಿಸಗುಪ್ಪಿ,ಮಾಜಿ ಮೇಯರ್ ಬಸವರಾಜ ಚಿಕ್ಕಲದಿನ್ನಿ ಸೇರಿ ಇನಿತರರು ಉಪಸ್ಥಿತರಿದ್ದರು.
ಇನ್ನೂ ಮುಂಬರುವ ದಿನಗಳಲ್ಲಿ ಕಂಪನಿಯೂ ಸುತ್ತಮುತ್ತಲಿನ 7ಗ್ರಾಮಗಳಿಗೂ ಸಹಾಯ ಹಸ್ತ ಚೆಲ್ಲಲ್ಲು ಉದ್ದೇಶಿಸಿದೆ.