ಮಹಾಲಿಂಗಪುರ : ಮುಗಳಖೋಡದ ಯುವಕನಿಗೆ ಕೊರೋನಾ ಪಾಸಿಟಿವ್

ಮಹಾಲಿಂಗಪುರ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಳಖೋಡ ಗ್ರಾಮದ ೨೨ ರ‍್ಷದ ಯುವಕನಿಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಸದರಿ ವ್ಯಕ್ತಿಯು ಕಲಾದಗಿ, ಬಾದಾಮಿ ತಾಲೂಕಿನ ಹನಗವಾಡಿ , ಶಾರದಾಳ ಮತ್ತು ಮುಧೋಳದಲ್ಲಿ ಜರುಗಿದ ಇಸ್ತಮಾದಲ್ಲಿ ಭಾಗವಹಿಸಿದ್ದರು , ಸದರಿ ಗ್ರಾಮದ ೧೧ ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು, ಇಂದು ಇವರಲ್ಲಿ ೨೨ ರ‍್ಷದ ಯುವಕನಿಗೆ ಕೊರೋನಾ ಪಾಸಿಟಿವ್ ಎಂದು ವೈದ್ಯಾಧಿಕಾರಿಗಳು ಘೋಷಿಸಿರುವುದಾಗಿ ಹಾಗೂ ಸೂಕ್ತ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಥಳೀಯ ಠಾಣಾಧಿಕಾರಿ ತಿಳಿಸಿದ್ದಾರೆ.
Share