ರಾಯಬಾಗ :ಡಾ.ಬಾಬಾಸಾಹೇಬ ಅಂಬೇಡಕರವರ 129 ನೇ ಜನ್ಮ ದಿನಾಚರಣೆ

ರಾಯಬಾಗ : ಡಾ.ಬಾಬಾಸಾಹೇಬ ಅಂಬೇಡಕರರವರು ಬರೆದ ಸಂವಿಧಾನದ ಫಲವಾಗಿಯೇ ದಲಿತರಿಗೆ ಹಿಂದುಳಿದ ವರ್ಗದವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ನ್ಯಾಯಬದ್ಧವಾಗಿ ಸಂವಿಧಾನ ರಚಿಸಿ ಇಡೀ ಮಾನವ ಕುಲ ಮರೆಯದಂಥ ಉಪಕಾರ ಮಾಡಿದ್ದಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದ್ದಾರೆ.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡಕರವರ 129 ನೇ ಜನ್ಮ ದಿನಾಚರಣೆಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಸಂವಿಧಾನ ಬದ್ಧವಾಗಿ ಅಧಿಕಾರ ಪಡೆದ ಎಲ್ಲರೂ ಬಡ ಕುಟುಂಬದವರೆಲ್ಲರಿಗೂ ಸರಕಾರದ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಹೇಳಿದರು.
ತಹಶೀಲ್ದಾರ ಚಂದ್ರಕಾAತ ಭಜಂತ್ರಿ, ನ್ಯಾಯವಾದಿ ಡಿ.ಎಚ್.ಯಲ್ಲಟ್ಟಿ, ಸಿ.ಪಿ.ಐ ಕೆ.ಎಸ್.ಹಟ್ಟಿ, ದಲಿತ ನಾಯಿಕ ಮಹಾವೀರ ಸಾನೆ ಡಾ. ಬಿ.ಆರ್.ಅಂಬೇಡಕರವರ ಕುರಿತು ಮಾತನಾಡಿದರು.
ಸಭೆಯಲ್ಲಿ ತಾ.ಪಂ.ಇಒ ಪ್ರಕಾಶ ವಡ್ಡರ, ಸಮಾಜ ಕಲ್ಯಾಣ ಅಧಿಕಾರಿ ಪಿ.ಎಸ್.ಪತ್ತಾರ, ಎಂ.ಎಸ್.ಪಾಟೀಲ, ಕಿರಣ ಕಾಂಬಳೆ, ಅನಿಲ ಸಾನೆ, ಅಪ್ಪಾಸಾಹೇಬ ಕೆಂಗನ್ನವರ, ರವೀಂದ್ರ ಹಂದಿಗುAದ, ಪಿ.ಎಸ್.ಐ ಗಜಾನನ ನಾಯಿಕ, ಎಮ್.ಆರ್.ಕಣ್ಮಣಿ ಹಾಗೂ ತಾಲೂಕಾ ಅಧಿಕಾರಿಗಳು ಉಪಸ್ಥಿತರಿದ್ದರು