ಸಾಮಾಜಿಕ‌ ಅಂತರ ಕಾಯ್ದುಕೊಂಡು ಸಂವಿಧಾನ ಪಿತಾಮಹ ಅಂಬೇಡ್ಕರ್ ಜಯಂತಿ ಆಚರಿಸಿದ ಗಣೇಶ ಹುಕ್ಕೇರಿ 

ಚಿಕ್ಕೋಡಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 129 ನೇ ಜಯಂತಿಯನ್ನು  ಚಿಕ್ಕೋಡಿ – ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಪಟ್ಟಣದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಪಟ್ಟಣದ ಅಂಬೇಡ್ಕರ್ ಅಭಿಮಾನಿಗಳಿಂದ ಅತ್ಯಂತ ಸರಳವಾಗಿ ಆಚರಿಸಿ ಸಮಸ್ತ     ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದರು.
ಕೋರೋನಾ ಹಿನ್ನೆಲೆಯಲ್ಲಿ ಇಂದು  ಪಟ್ಟಣದ ಕೋರ್ಟ್ ಹತ್ತಿರದ ಅಂಬೇಡ್ಕರ್ ರವರ ಪುತಳಿಗೆ ಅತ್ಯಂತ ಸರಳವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂವಿಧಾನ ಪಿತಾಮಹ ಅಂಬೇಡ್ಕರ್ ಅವರ ಪುತಳಕ್ಕೆ ನಮನ ಸಲ್ಲಿಸಿ ಜಯಂತಿಯನ್ನು ಆಚರಿಸಿದರು.
ಈ‌ ಸಂದರ್ಭದಲ್ಲಿ ತಹಶಿಲ್ದಾರರಾದ ಸುಭಾಸ ಸಂಪಗಾವಿ ಪುರಸಭೆಯ ಅಧಿಕಾರಿಯಾದ  ಸುಂದರ ರೊಗಿ‌  ಡಿ ವಾಯ್ ಎಸ್ ಪಿ  ಮನೊಜ ನಾಯ್ಕ  ಸಮಾಜ ಕಲ್ಯಾಣ ಅಧಿಕಾರಿ ಉಳಾಗಡಿ  ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು ಇದ್ದರು.
Share