ಸ್ವಚ್ಚತೆಗೆ ಆದ್ಯತೆ ನಿಡೋಣ, ಕೊರೋನಾ ಹೊಡೆದೋಡಿಸೋಣ” ಶಶಿಕಲಾ ಜೊಲ್ಲೆ 

ಚಿಕ್ಕೋಡಿ:- ಸಮೀಪದ ನಿಪ್ಪಾಣಿ ಮತ  ಕ್ಷೇತ್ರದ ಯರನಾಳ ಗ್ರಾಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವೈದ್ಯಾಧಿಕಾರಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಊರಿನ ಪ್ರಮುಖರೊಡನೆ ಸಚಿವೆ. ಶಶಿಕಲಾ ಜೊಲ್ಲೆ  ಸಮಾಲೋಚನೆ ನಡೆಸಿ, ಲಾಕ್ ಡೌನ್ ನಿರ್ವಹಣೆ ಹಾಗೂ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು, ಸಭೆ ಉದ್ದೇಶಿಸಿ ಮಾತನಾಡಿದರು.
ಮಹಾಮಾರಿ ಕೊರೋನಾ ತಡೆಗಟ್ಟಲು ಮನೇಯಲ್ಲಿಯೇ ಇದ್ದು, ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಅಗತ್ಯ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು‌‌. ಕೊರೋನಾ ಸೋಂಕಿನ ಬಗ್ಗೆ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿ,ಪಡಿತರ ವಿತರಣೆಯಲ್ಲಿ ಏನಾದರು ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರುವಂತೆ ಸೂಚಿಸಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮಾರ್ಗದರ್ಶನ ನೀಡಿ, ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು
Share