ಹಾರೂಗೇರಿಯಲ್ಲಿ ಜನಸಂದಣಿ ನಿಯಂತ್ರಿಸಲು ಡ್ರೋಣ ಕ್ಯಾಮರಾದಿಂದ ನಿಗಾ

ಹಾರೂಗೇರಿ : ಪಟ್ಟಣದಲ್ಲಿ ಕೆಲವರು ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮನೆಯಿಂದ ವಿನಾಕಾರಣ ಹೊರಗೆ ಬಂದು ಅನ್ಯರ ಜೀವದೊಂದಿಗೆ ಚೆಲ್ಲಾಟ ನಡೆಸಿದ್ದು, ಪೋಲಿಸರು ಮತ್ತು ಪುರಸಭೆಯವರು ಸಾಕಷ್ಟೂ ಮುಂಜಾಗೃತ ಕ್ರಮ ಕೈಗೊಂಡಿದ್ದರು ಜನರು ಹೊರಗೆ ಬರುತ್ತಿರುವದರಿಂದ ಹಾರೂಗೇರಿ ಪಟ್ಟಣದಲ್ಲಿ ಇಂದು ಮನೆಯಿಂದ ಹೊರಗೆ ಬರುವವರ ಮೇಲೆ ನಿಗಾವಹಿಸಲು ಹಾರೂಗೇರಿ ಪೋಲಿಸರು ಡ್ರೋಣ ಕ್ಯಾಮರಾ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.
ಹೊರಗೆ ಓಡಾಡುತ್ತಿರವ ಜನರ ಹತ್ತಿರ ಪೋಲಿಸರು ಹೋದಾಗ ಜನರು ಮನೆ ಸೇರುತ್ತಾರೆ ನಂತರ ವಾಪಸ್ ಹೊರಗೆ ಬರುತ್ತಿದ್ದು ಅಂಥಹವರನ್ನು ಗುರುತಿಸಲು ಹಾರೂಗೇರಿ ಪೋಲಿಸ ಇಲಾಖೆ ಡ್ರೋಣ ಕ್ಯಾಮರಾ ಬಳಕೆ ಮಾಡುತ್ತಿದ್ದಾರೆ.

ಪಿ.ಎಸ್. ಐ ಯಮನಪ್ಪ ಮಾಂಗ, ಹವಾಲ್ದಾರ ಕುಮಾರ ಪವಾರ, ಹಣಮಂತ ಅಂಬಿ, ಶಿವಾನಂದ ಬಡಿಗೇರ, ಪರಮೇಶ್ವರ ಗುಡೋಡಗಿ, ಸದಾಶಿವ ಪಾಟೀಲ್, ಶ್ರೀಧರ ಬಾಂಗಿ ಇದ್ದರು.
Share