ಹಿರೇಬಾಗೇವಾಡಿ ವೃದ್ಧೆ ಸಾವಿನ ರಹಸ್ಯ ಕೊನೆಗೂ ಬಯಲು

ಕೊರೋನಾ ಏಟಿಗೆ ಹಿರೇಬಾಗೇವಾಡಿ ವೃದ್ಧೆ ಸಾವು
ಬೆಳಗಾವಿ: ಹಿರೇಬಾಗೇವಾಡಿ ವೃದ್ಧೆ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ಸೋಂಕು ತಗುಲಿದ ವ್ಯಕ್ತಿಯ ಮನೆಯವಳಾದ ಈ ೮೦ ವರ್ಷದ ವೃದ್ದೆ ಕೋವಿಡ್-೧೯ ಸೋಂಕು ತಗುಲಿದ ಪರಿಣಾಮ ಬಲಿಯಾಗಿದ್ದಾಳೆ.
ವೃದ್ಧೆಯ ಗಂಟಲ ದ್ರವದ ಮಾದರಿ ಪರೀಕ್ಷೆಯಲ್ಲಿ ಕೋವಿಡ್-೧೯ ಸೋಂಕು ತಗುಲಿರುವುದು ದೃಢವಾಗಿದೆ.
ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ಸಂಚಲನ ಮೂಡಿಸಿದ ಹಿರೇಬಾಗೇವಾಡಿಯ ವೃದ್ಧೆಯ ಸಾವು ಪ್ರಕರಣ ಕೊನೆಗೂ ತೆರೆ ಬಿದ್ದಂತಾಗಿದೆ.
ನA ೨೨೪ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ೮೦ ವರ್ಷದ ವೃದ್ದೆಗೆ ಕೋರೊನಾ ಸೋಂಕಿನಿAದಲೇ ವೃದ್ಧೆಯ ಸಾವು ಎಂದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೋರೊನಾ ವೈರಸ್ ಗೆ ಮೊದಲ ಬಲಿಯಾಗಿದ್ದಾಳೆ. ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು ಸದ್ಯ ವರದಿ ಪಾಸಿಟಿವ್ ಎಂದು ಬಂದಿದೆ. ರಾಜ್ಯದಲ್ಲಿ ಒಟ್ಟು ಈ ವರೆಗೆ ೧೨ ಸಾವು ಸಂಭವಿಸಿದೆ. ೨೨೪ ವ್ಯಕ್ತಿಯಿಂದ ಈ ವೃದ್ಧೆಗೆ ಸೋಂಕು ತಗಲಿದೆ. ಹದಿನೆಂಟು ಸೋಂಕಿತರು ಹಾಗೂ ಒಂದು ಬಲಿ ತೆಗೆದುಕೊಂಡ ಕರಾಳತೆಗೆ ಬೆಳಗಾವಿ ಅಂಟಿಕೊoಡಿದೆ.
Share