ಮೂಡಲಗಿ ಪೋಲಿಸ್ ಠಾಣೆಯಲ್ಲಿ 25 ಪ್ರಕರಣ,48 ದ್ವಿಚಕ್ರ ವಾಗನ ಸಿಜ್

ಮೂಡಲಗಿ: ಮೊದಲ ಹಂತದ ಲಾಕ್‍ಡೌನ್ ನಿರ್ಬಂಧವನ್ನು ಉಲ್ಲಂಘಿಸಿ ಅನವಶ್ಯಕ ತಿರುಗಾಡಿದ ದ್ವಿಚಕ್ರ ಸವಾರರು, ಅಂಗಡಿಕಾರು ಸೇರಿ ಒಟ್ಟು ಮೂಡಲಗಿ ಪಟ್ಟಣದಲ್ಲಿ 28 ಪ್ರಕರಣಗಳನ್ನು ದಾಖಲಿಸಿ ಅವುಗಳ ಪೈಕಿ 23 ಜನರನ್ನು ಬಂಧಿಸಲಾಗಿದೆ ಎಂದು ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ್ ತಿಳಿಸಿದರು.
ಅನವಶ್ಯಕವಾಗಿ ತಿರುಗಾಡುತ್ತಿದ್ದ ಒಟ್ಟು 48 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಲಾಗಿದೆ ತಿಳಿಸಿದರು.
ಮೂಡಲಗಿಯ ಗಡಿ ಭಾಗದಲ್ಲಿರುವ ಮುಧೋಳ ಮತ್ತು ರಾಯಬಾಗ, ಕುಡಚಿ ಪಟ್ಟಣಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಮೂಡಲಗಿ ತಾಲ್ಲೂಕು ಗಡಿ ಪ್ರವೇಶ ಮಾಡುವ ಜನರ ಸಂಚಾರದ ಮೇಲೆ ಪೂರ್ಣ ನಿಗಾ ಇಟ್ಟಿರುವರು. ಮೂಡಲಗಿ ಪ್ರವೇಶಿಸುವ ಗೋಕಾಕ ಕ್ರಾಸ್, ಮುಗಳಖೋಡ ಕ್ರಾಸ್ ಬಳಿಯಲ್ಲಿ ಹೆದ್ದಾರಿ ಮತ್ತು ಯಾದವಾಡದಲ್ಲಿ ಮುಧೋಳ ರಸ್ತೆಗೆ ಪೊಲೀಸ್ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳ ಸಂಚಾರದ ಮೇಲೆ ನಿಗಾ ಇಟ್ಟಿರುವರು. ಚೆಕ್‍ಪೋಸ್ಟ್ ಸೇವೆಗೆ ಶಿಕ್ಷಕರ ಸಹಾಯ ಪಡೆದಿದ್ದು ಪ್ರತಿ ನಾಲ್ಕು ಗಂಟೆವರೆಗೆ ಶಿಪ್ಟ್ ರೀತಿಯಲ್ಲಿ 48 ಜನ ಶಿಕ್ಷಕರು ಪೊಲೀಸರೊಂದಿಗೆ ಕಾರ್ಯಮಾಡುತ್ತಿದ್ದಾರೆ.
ಮೂಡಲಗಿ ಪಟ್ಟಣದ ಒಳಗೆ ಹೊರಗೆ ಹೋಗುವ ವಾಹನಗಳನ್ನು ಪರಿಶೀಲಿಸಿ ಬಿಡುತ್ತಿರುವರು. ಬೇರೆ ಸ್ಥಳಗಳಿಂದ ಬರುವ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆ ಮಾಡಿ ಅವಶ್ಯವಿದ್ದರೆ ಸಮುದಾಯ ಕ್ವಾರಂಟೈನ್‍ದಲ್ಲಿ ಇಡುವ ಏರ್ಪಾಡು ಸಹ ಮಾಡಿರುವರು.
ಎಚ್ಚರಿಕೆ: ಅನಗತ್ಯವಾಗಿ ರಸ್ತೆ ಮೇಲೆ ತಿರುಗಾಡುವವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಿಪಿಐ ವೆಂಕಟೇಶ ಮುರನಾಳ ಅವರು ಎಚ್ಚರಿಕೆ ನೀಡಿದ್ದಾರೆ. ನಿಗದಿಪಡಿಸುವ ಸಮಯದಲ್ಲಿ ತರಕಾರಿ, ದಿನಸಿ, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳನ್ನು ತೆಗೆದುಕೊಂಡು ಮನೆ ಸೇರಬೇಕು. ಬೇರೆ ಅವಧಿಯಲ್ಲಿ ಯಾರಿಗೂ ರಸ್ತೆ ಮೇಲೆ ಸಂಚರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆನೆದಾರು ಕಂಡು ಬಂದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ. ಮುರನಾಳ ಅವರು ತಿಳಿಸಿದ್ದಾರೆ.
Share
WhatsApp
Follow by Email