ಬ್ರೇಕಿಂಗ್ ನ್ಯೂಸ್

ಹಳ್ಳೂರ : ಕರೋನಾ ವೈರಾಣು ಹರಡುವಿಕೆ ತಡೆಗಟ್ಟುವ ನೈರ್ಮಲಿಕರಣ ಘಟಕಗಳ ಉದ್ಘಾಟನೆ


ಹಳ್ಳೂರ : ಗ್ರಾಮದಲ್ಲಿ ಗ್ರಾಪಂ ಸದಸ್ಯರು ನಿರ್ಮಿಸಿದ ಕರೋನಾ ವೈರಾಣು ಹರಡುವಿಕೆ ತಡೆಗಟ್ಟುವ ನೈರ್ಮಲಿಕರಣ  ಘಟಕವನ್ನು ಗ್ರಾಪಂ ಅಧ್ಯಕ್ಷ ಕಲಾವತಿ ಮಿರ್ಜಿ ಹಾಗೂ ಉಪಾಧ್ಯಕ್ಷ ಉಮೇಶ್ ಸಂತಿ ಉದ್ಘಾಟಿಸಿದರು.
ಇದೆ ಸಂದರ್ಭದಲ್ಲಿ
ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಯಾವುದೇ ಕೊರೋನಾ ವೈರಸ್ ಬರದಂತೆ ತಡೆಯುವ ಸಲುವಾಗಿ ಎಲ್ಲ ಸದಸ್ಯರು ಸೇರಿ ವೈರಾಣು ಹರಡುವಿಕೆ ತಡೆಗಟ್ಟುವ ನೈರ್ಮಲಿಕರಣ  ಘಟಕವನ್ನು ಉದ್ಘಾಟಿಸಿದ್ದೇವೆ. ಹಾಗೂ ನಾಳೆಯಿಂದ ಗ್ರಾಮದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಗ್ರಾಮದ ಬೀದಿ ಬೀದಿಗಳಲ್ಲಿ ಹದ್ದಿನ ಕಣ್ಣಿಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ದೇಶದಾದ್ಯಂತ ಮತ್ತು  ನಮ್ಮ ರಾಜ್ಯದಲ್ಲಿ ಕೂಡ  ಕೊರೋನಾ ವೈರಸ್  ಮಹಾಮಾರಿ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲರಿಗೂ ಸ್ಯಾನಿಟೈಜರ್ ಮುಖ್ಯ. ಪೊಲೀಸರು ವೈದ್ಯರು, ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೊರೋನಾ ಸೈನಿಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿಗಳು ಹಾಗೂ ಕೊರೋನಾ ಸೈನಿಕರು ಉಪಸ್ಥಿತರಿದ್ದರು.

About the author

admin