ಕೊರೊನಾ ಹಾವಳಿ ಮದ್ಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಹಾಲಿಗಾಗಿ ರಾಜಕಾರಣಿಗಳ ಕಿತ್ತಾಟ.


ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಕೊರೊನಾ ಹಾವಳಿಯಿಂದ ದೇಶವನ್ನು ಲಾಲ್ ಡೌನ್ ಮಾಡಿದ ಸರ್ಕಾರಗಳು ಈ ಲಾಕ್ ಡೌನ್ ನಿಂದ ಬಡವರಿಗೆ ತೊಂದರೆ ಆಗದಂತೆ ಸ್ಲಮ್ ಏರಿಯಾಗಳ ಬಡ ಜನರಿಗೆ ಉಚಿತವಾಗಿ ಹಾಲು ನೀಡುವ ಯೋಜನೆ ತಂದಿದ್ದು ಈಗ ಅದುವೇ ರಾಜಕೀಯದ ಮುಖಂಡರ ಕಿತ್ತಾಟ್ಟಕ್ಕೆ ಕಾರಣವಾಗಿದೆ.
ತಮ್ಮ ತಮ್ಮ ಏರಿಯಾಗಳ ಹಾಲು ಹಂಚಿಕೆಯ ವಿಷಯವಾಗಿ ಪುರಸಭೆ ಸದಸ್ಯರು ರಾಜೀನಾಮೆ ನೀಡಿವು ಹಂತಕ್ಕೆ ತಲುಪಿದೆ ಎಂದರೆ ಎಷ್ಟರ ಮಟ್ಟಿಗೆ ಉಚಿತ ಹಾಲಿನ ಯೋಜನೆ ದೊಡ್ಡ ಮಟ್ಟದ ಸಮಸ್ಯೆಯಾಗಿದೆ. ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಪುರಸಭೆ ಸದಸ್ಯ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಎಂಬುವರ ಪತ್ನಿಯು ಈಗ ಪುರಸಭೆ ಬಿಜೆಪಿ ಪಕ್ಷದಿಂದ ವಾರ್ಡ ನಂ 6 ರ ಚುನಾಯಿತ ಸದಸ್ಯೆಯಾಗಿದ್ದು
ಬಸವ ನಗರಕ್ಕೆ ಸಂಭಂದಿಸಿದ ಸ್ಲಮ್ ಏರಿಯಾಗಳಲ್ಲಿ ದಿನನಿತ್ಯ ಸರ್ಕಾರ ನೀಡುವ ಉಚಿತ ಹಾಲನ್ನು ನೀಡುತ್ತಿದ್ದರು ಇದರಲ್ಲಿ ಅದ್ಯಾವ ರೀತಿಯಲ್ಲಿ ತಪ್ಪಾಗಿ ಗ್ರಹಿಸಿತೊ ಗೊತ್ತಿಲ್ಲ ಅದು ಬಿಜೆಪಿ ಪಕ್ಷದ ಮುಖಂಡರ ಗಮನಕ್ಕೆ ಬಂದು ಪೋನ್ ಮುಖಾಂತರ ಕಿತ್ತಾಡಿರುವ ಘಟನೆ ಬೆಳಕಿಗೆ ಬಂದಿದೆ. 16 ವರ್ಷಗಳಿಂದ ಪಕ್ಷದಲ್ಲಿ ದುಡಿದು, ಎರಡು ಬಾರಿ ನಾನು ಮತ್ತು ನನ್ನ ಧರ್ಮ ಪತ್ನಿ ಪುರಸಭೆ ಸದಸ್ಯರಾಗಿದ್ದು. ಈಗಾಗಲೇ ವಾರ್ಡಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದ ನನಗೆ, ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಸತತವಾಗಿ ಸೇವೆ ಸಲ್ಲಿಸಿದರು ಸಹ ಮುಖಂಡರ ವರ್ತನೆ ಸಾರ್ವಜನಿಕವಾಗಿ ನಮಗೆ ತುಂಬಾ ನೋವಾಗಿದ್ದು ಅದಕ್ಕಾಗಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಎಂದು ಚನ್ನಬಸು ಹುರಕಡ್ಲಿ ಪೋನಿನ ಸಂಭಾಷಣೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
Share
WhatsApp
Follow by Email