ಮೇ 3 ರವರೆಗೆ ಲಾಕ್ ಡೌನ್ ಕಟ್ಟು ನಿಟ್ಟಾಗಿ ಪಾಲಿಸಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ.

ಚಿಕ್ಕೋಡಿ:- ನಿಪ್ಪಾಣಿ ಮತಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಾದ ಹುನ್ನರಗಿ,ಸಿದ್ನಾಳ ಬೋಳೆವಾಡಿ, ಜೈನವಾಡಿ ಗ್ರಾಮಗಳಿಗೆ ಸಚಿವೆ ಶಶಿಕಲಾ ಜೋಲ್ಲೆ ಭೇಟಿ ನೀಡಿ ಇದು ಇಡೀ ವಿಶ್ವವೆ ಕೊರೋನಾ ವೈರಸ್ ದಿಂದ ಬಳಲಿತ್ತಿದೆ ಈ ಹಿನ್ನಲೆಯಲ್ಲಿ ನಾವೆಲ್ಲರೂ ಕೊರೋನಾ ವೈರಸ್ ಹರಡದಂತೆ ನೋಡಿಕೊಳ್ಳಬೇಕು ಮಾನ್ಯ ಪ್ರದಾನಿ ನರೇಂದ್ರ ಮೋದಿ ಯವರು ಕರೆ ನೀಡಿರುವ ಸಪ್ತ ನಿಯಮಗಳನ್ನು ನಾವೆಲರೂ ಪಾಲಿಸಬೇಕು .
ಸಂಬಂದ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು
ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಎಲ್ಲ ರೀತಿಯ ಮುಂಜಾಗ್ರತ ಕ್ರಮ ಕೈಗೊಂಡು,ಕೊರೋನಾ ವೈರಸ್ ಹೊಡೆದೊಡಿಸುನ ಎಂದು ಅಧಿಕಾರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನಿಡಿದರು.
ಅಧಿಕಾರಿಗಳ ಸಭೆಯಲ್ಲಿ
ಪಡಿತರ ವಿತರಣೆಯಲ್ಲಿ ತಾರತಮ್ಯದ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೆ ತಂದರು ಕೋರೋನಾ ವೈರಸ ಹಿನ್ನಲೆಯಲ್ಲಿ ಸರಕಾರ ಎರಡು ತಿಂಗಳ ಪಡಿತರ ನೀಡುತ್ತಿದ್ದು ಅಕ್ಕಿ ಗೋಧಿಯನ್ನು ಕಟ್ಟು ನಿಟ್ಟಾಗಿ ವಿತರಿಸಬೇಕು ತಪ್ಪು ಕಂಡುಬಂದರೆ ಅಂತಹ ಅಂಗಡಿ ಲ್ವೈಸನ್ಸ ರದ್ದು ಮಾಡಲಾಗುವುದು ಎಂದು ನ್ಯಾಯಬೆಲೆ ಅಂಗಡಿಯವರಿಗೆ ಮಾಲಿಕರಿಗೆ ಎಚರಿಕ್ಕೆ ಹೇಳಿದರು. ಈ ಸಂದರ್ಭದಲ್ಲಿ
ಆರೋಗ್ಯ ಇಲಾಖೆ ಅಧಿಕಾರಿಗಳು,ಕಂದಾಯ ಇಲಾಖೆ ಅಧಿಕಾರಿಗಳು,ಪ.ಪಂ ಅಧಿಕಾರಿಗಳು,ಪೋಲಿಸ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಹೆಚ್ಚಿನ ನಿಗಾ ವಹಿಸಿ ಕಾರ್ಯನಿರ್ವಹಿಸಬೇಕು.ಆಶಾ ಹಾಗೂ ಅಂಗಣವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸರ್ವೆ ಮಾಡುತ್ತಿದ್ದು ಅವರಿಗೆ ಜನರು ಸಹಕರಿಸಬೇಕು.
ಸಭೆಯಲ್ಲಿ ತಹಶಿಲ್ದಾರ ಪ್ರಕಾಶ ಗಾಯಕವಾಡ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಉಳಾಗಡ್ಡೆ, ಸೇರಿದಂತೆ ಅಂಗಣವಾಡಿ,ಆಶಾ ಕಾರ್ಯಕರ್ತೆಯರು,ಪ.ಪಂ ಸಿಬ್ಬಂದಿ ಹಾಜರಿದ್ದರು.
Share