ಕಿತ್ತೂರ ಹಾಗೂ ಬೈಲಹೊಂಗಲ ಪಿಕೆಪಿಎಸ್‌ಗಳಿಂದ ಸಂಗ್ರಹಿಸಿದ ಹಣ ಸಿಎಂ ಕೊರೋನಾ ಪರಿಹಾರ ನಿಧಿಗೆ ಹಸ್ತಾಂತರ


ಬೈಲಹೊಂಗಲ : ಕಿತ್ತೂರ ಹಾಗೂ ಬೈಲಹೊಂಗಲ ಪಿಕೆಪಿಎಸ್‌ಗಳಿಂದ ಸಂಗ್ರಹಿಸಿದ ಹಣದ ಮೊತ್ತದ ಚೆಕ್‌ಗಳನ್ನು ಕಿತ್ತೂರ ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಸಿಎಂ ಕೊರೋನಾ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಬೈಲಹೊಂಗಲ ಸಹಾಯಕ ನಿಬಂಧಕರ ಮೂಲಕ ಪರಿಹಾರ ಧನದ ಚೆಕ್ ಅನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಯಿತು. ಬೈಲಹೊಂಗಲ ತಾಲೂಕು ಹಾಗೂ ಕಿತ್ತೂರ ತಾಲೂಕಿನ ಎಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳಿAದ 2,75,000.00 ರೂ ಹಾಗೂ ಬೈಲಹೊಂಗಲ ತಾಲೂಕಿನ ಒಕ್ಕಲುತನ ಹಟ್ಟುವಳಿ ಮಾರಾಟ ಸಹಕಾರಿ ಸಂಘ ನಿ. ಬೈಲಹೊಂಗಲ ವತಿಯಿಂದ 25,000.00 ಹಾಗೂ ಕಿತ್ತೂರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ. ಚನ್ನಮ್ಮ ಕಿತ್ತೂರ ವತಿಯಿಂದ 10,000.00 ರೂಗಳ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.
ಭೀಕರ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ಚೆಕ್‌ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಸಿಬ್ಬಂಧಿಗಳಾದ ಬಿ.ಕೆ. ಪಾಟೀಲ್, ಎ.ಎಂ. ಬೆಟಗೇರಿ, ಎ.ಕೆ. ಮಾಸ್ತಿ, ಸಿಡಿಓ ಬೈಲಹೊಂಗಲ ಎಸ್.ಎಸ್. ಪಾಟೀಲ್, ಪಿಕೆಪಿಎಸ್ ಸಿಬ್ಬಂದಿಗಳಾದ ಎ.ಎಂ. ರಾಯಣ್ಣವರ ಉಪಸ್ಥಿತರಿದ್ದರು
Share