ಬೆಳಗಾವಿ ಜಿಲ್ಲೆಗೆ ಅಲ್ಪ ವಿರಾಮ ನೀಡಿದ ಕೊರೋನಾ ವೈರಸ್

ಬೆಳಗಾವಿ: ರವಿವಾರದ ಮಧ್ಯಾಹ್ನದ ಕರ್ನಾಟಕ ಆರೋಗ್ಯ ಇಲಾಖೆ ಕೊರೋನಾ ಬುಲೆಟಿನ್ ಬಿಡುಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಯಾರಿಗೂ ಸೋಂಕು ದೃಢ ಪಟ್ಟಿಲ್ಲ.
ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ೪೨ ಕ್ಕೆಉಳಿದಿದೆ.
ಇಂದು ರಾಜ್ಯದಲ್ಲಿ 4 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಆರಂಭವಾದಾಗಿನಿಂದ ಈವರೆಗೆ 749 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನಿನ್ನೆಯ ವರದಿ ಪ್ರಕಾರ 171 ಜನ ಶಂಕಿತರ ರಿಪೋರ್ಟ್ ಬರಬೇಕಿತ್ತು.
ಒಟ್ಟು ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ೩೮೮ ಕ್ಕೆ ಏರಿದೆ. ಇಂದಿನ ಎಲ್ಲ ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ.