ಕಾರ್ಮಿಕರಿಗೆ ನೀಡಿದಂತಹ ಸೌಲಭ್ಯವನ್ನು ಕ್ಷೌರಿಕರಿಗೂ ನೀಡಿ: ಸಂತೋಷ ಹಡಪದ

ಬೈಲಹೊಂಗಲ : ಕ್ರೂರಿ ಕರೋಣಾ ವೈರಸ್‌ನಿಂದಾಗಿ ರಾಜ್ಯದ ಸುಮಾರು ಐದು ಲಕ್ಷ ಕ್ಷೌರಿಕ ವೃತ್ತಿ ಮಾಡುವವರ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಆಗಿದೆ. ಕಾರ್ಮಿಕರಿಗೆ ನೀಡಿದಂತಹ ಸೌಲಭ್ಯವನ್ನು ಕ್ಷೌರಿಕರಿಗೂ ನೀಡಿ ಈ ಸಮುದಾಯದ ಹಿತ ಕಾಪಾಡುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ಯುವ ಮುಖಂಡ ಸಂತೋಷ ಹಡಪದ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ನಿಂದಾಗಿ ರಾಜ್ಯದ ಹಡಪದ ಸಮುದಾಯದ ಎಲ್ಲ ಅಂಗಡಿಗಳು ಬಂದ್ ಆಗಿವೆ ಇದರ ಪರಿಣಾಮ ಕ್ಷೌರಿಕ ವೃತ್ತಿಯನ್ನು ನಂಬಿಕೊAಡು ಜೀವನ ನಡೆಸುತ್ತಿರುವ ಹಡಪದ ಸಮಾಜ ಸಾಕಷ್ಟು ತೊಂದರೆಗೆ ಒಳಗಾಗಿದೆ. ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿರುವ ಹಡಪದ ಸಮಾಜದ ದಯನೀಯ ಸ್ಥಿತಿ ಸರಕಾರಕ್ಕೆ ಕಾಣುತ್ತಿಲ್ಲವೇಂದು ಪ್ರಶ್ನಿಸಿದರು. ಸರ್ಕಾರವು ಎಚ್ಚೆತ್ತುಕೊಂಡು ಸಮುದಾಯದ ಮೇಲೆ ಕಣ್ಣು ಹರಿಸದಿದ್ದರೆ ಕುಟುಂಬಗಳು ಬೀದಿಗೆ ಬರುವಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಶೀಘ್ರವೇ ಹಡಪದ ಸಮುದಾಯದ ಮನವಿಯನ್ನು ಪುರಸ್ಕರಿಸಿ ವಿಶೇಷ ಪ್ಯಾಕೇಜ್ ನೀಡಿ ಕ್ಷೌರಿಕರ ಹಿತ ಕಾಪಾಡಬೇಕು. ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಬದುಕುತ್ತಿರುವ ಈ ಸಣ್ಣ ಸಮುದಾಯಕ್ಕೆ ಕೈಹಿಡಿಯುವ ಯಾವೊಬ್ಬ ರಾಜಕೀಯ ನಾಯಕರು ಈ ಸಮುದಾಯದಲ್ಲಿ ಇಲ.್ಲ ಎಲ್ಲ ಶಾಸಕರು, ಸಂಸದರು ಹಾಗೂ ಸಚಿವರು ಸಮಾಜದ ಪರವಾಗಿ ಕೈಜೋಡಿಸಬೇಕು. ಒಂದು ದಿನದ ಕುಟುಂಬ ನಿರ್ವಹಣೆ ನಡೆಸುವುದು ಬಹಳಷ್ಟು ಕಷ್ಟಕರವಾಗಿದೆ. ಅಂದೇ ದುಡಿದು ಅಂದೇ ತಿನ್ನುವಂತಹ ಸಂಪ್ರದಾಯ ಇತ್ತು. ಈ ಮಹಾಮಾರಿ ಕರುಣಾ ವೈರಸ್‌ನಿಂದಾಗಿ ಎಲ್ಲ ಅಂಗಡಿಗಳು ಸಿಲ್ಡೌನ್ ಆಗಿ ಬದುಕು ಕಟ್ಟಿಕೊಳ್ಳಲು ಚಡಪಡಿಸುತ್ತಿರುವ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಗ್ರಾಮೀಣ ಪ್ರದೇಶದ ಜನರಲ್ಲಿ ಸಾಕಷ್ಟು ಆತಂಕ ಎಡೆಮಾಡಿದೆ. ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಮಾಜವನ್ನು ಮೇಲೆತ್ತಲು ಸರ್ಕಾರ ಶೀಘ್ರವೇ ಎಚ್ಚೆತ್ತುಕೊಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯದ ಸುಮಾರು ಐದು ಲಕ್ಷ ಕುಟುಂಬಗಳನ್ನು ಉಳಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
Share