ಬಿರುಗಾಳಿ ಸಹಿತ ಮಳೆಗೆ 2 ಎಕರೆ ಬಾಳೆ ನಾಶ

ಬೈಲಹೊಂಗಲ : ಸತತ 3 ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಸಮೀಪದ ಶ್ರೀಕ್ಷೇತ್ರ ಸೊಗಲ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ರೈತ ಈರಣ್ಣಾ ದೊಡ್ಡಪ್ಪ ಚಳಕೊಪ್ಪ ಅವರು ತಮ್ಮ 2 ಏಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ತೋಟ ಗಾಳಿ-ಮಳೆಗೆ ನಾಶವಾಗಿದ್ದು, 4ಲಕ್ಷ ರೂ.ಹಾನಿ ಸಂಭವಿಸಿದೆ. ಇನ್ನೋರ್ವ ರೈತ ಸೊಗಲ ಗ್ರಾಮದ ಬಸಪ್ಪಾ ಸೋಮಲಿಂಗಪ್ಪಾ ಪಟ್ಟಣಶೆಟ್ಟಿ ಅವರ 2.5 ಏಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ 12 ಲಕ್ಷ ರೂ.ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. ಮೊದಲೇ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ, ಮಾರುಕಟ್ಟೆ ಬಂದ್ ಆಗಿ ಬೆಲೆ ಕಳೆದುಕೊಂಡಿದ್ದ ಬಾಳೆ ಬೆಳೆಗೆ ಮಳೆ ಭಾರಿ ಹೊಡೆತ ನೀಡಿದೆ. ಕೇಂದ್ರ, ರಾಜ್ಯ ಸರಕಾರಗಳು ರೈತರ ನೆರವಿಗೆ ಧಾವಿಸಬೇಕೆಂದು ರೈತರು ವಿಕಗೆ ತಿಳಿಸಿದರು.
Share