ಮಹಾಲಿಂಗಪೂರ : ಕೊರೋನಾ ಹಿನ್ನೆಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಎನ್-95 ಮಾಸ್ಕ ಹಾಗೂ ಗ್ಲೌಜ್ ವಿತರಣೆ

ಮಹಾಲಿಂಗಪೂರ : ಡಾ.ಪದ್ಮಜೀತ ನಾಡಗೌಡ ಪಾಟೀಲ ಪೌಂಡೇಷನ್ ವತಿಯಿಂದ ಮತಕ್ಷೇತ್ರದ ತೇರದಾಳ,ರಬಕವಿ,ಬನಹಟ್ಟಿ,ಮಹಾಲಿಂಗಪೂರ ಪಟ್ಟಣಗಳಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ದಳ, ಪೋಲಿಸ್ ಸ್ಟೇಷನ್,ಚೆಕ್ ಪಾಯಿಂಟ್,ಪುರಸಭೆ ಸಿಬ್ಬಂದಿಹಾಗೂ ಪೌರ ಕಾರ್ಮಿಕರಿಗೆ ಮತ್ತು ಇನ್ನಿತರ ಸಮಾಜ ಸೇವಕರಿಗೆ ಅಂದಾಜು 250 ಜನರಿಗೆ ಉತ್ತಮ ದರ್ಜೆಯ ಎನ್-95 ಮಾಸ್ಕ ಹಾಗೂ ಗ್ಲೌಜ್ ನೀಡಿ ಅವರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಯಲ್ಲಣ್ಣಗೌಡ ಪಾಟೀಲ,ಡಾ.ಪದ್ಮಜೀತ ನಾಡಗೌಡ ಪಾಟೀಲ,ಶಂಕರ ಸೋರಗಾವಿ,ಪ್ರಕಾಶ ಮಮದಾಪೂರ,ನೀಲಕ ಮುತ್ತೂರ್,ಬಸಿರ ಸೌದಾಘರ, ಸಂಜು.ಜೊತಾವರ್,ಭೀಮಶಿ ಪಾಟೀಲ,ಚೇತನ ಕಲಾಲ್,ರವಿ ಬಾಡಗಿ ಮುಂತಾದವರಿದ್ದರು.
Share