ಶ್ರೀಶೈಲ ಪಾದಯಾತ್ರೆಗೆ ಹೋದ ಮಹಾಲಿಂಗಪ್ಪ ಕಾಣೆಯಾಗಿದ್ದಾರೆ

ಮಹಾಲಿಂಗಪುರ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಹಾಲಿಂಗಪ್ಪ ಶಿವಲಿಂಗಪ್ಪ ಮೋಪಗಾರ (೫೧) ಎಂಬ ವ್ಯಕ್ತಿ ಮರ‍್ಚ್ ೯ ರ ರಾತ್ರಿ ೯ ಗಂಟೆಗೆ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕರ‍್ಜುನ ದೇವಾಲಯಕ್ಕೆ ಪಾದ ಯಾತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆಗೂ ಮರಳಿ ಬಂದಿಲ್ಲ ಎಂದು ಆತನ ಪತ್ನಿ ಯಮನವ್ವ ಮಹಾಲಿಂಗಪೂರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿ ದುಂಡು ಮುಖ, ಗೋಧಿ ಮೈಬಣ್ಣ, ೫’.೫” ಎತ್ತರವಿದ್ದು, ತೆಳ್ಳನೆ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿ ಧೋತರ, ಉದ್ದ ತೋಳಿನ ಬಿಳಿ ಅಂಗಿ ಧರಿಸಿದ್ದು, ಕನ್ನಡ ಮಾತನಾಡುತ್ತಾರೆ.
ಈತನ ಸುಳಿವು ಸಿಕ್ಕಲ್ಲಿ ಮಹಾಲಿಂಗಪುರ ಪೋಲಿಸ್ ಠಾಣಾಧಿಕಾರಿ ಮೊ. ಸಂಖ್ಯೆ ೯೪೮೦೮ ೦೩೯೬೧ ಗೆ ಅಥವಾ ಬಾಗಲಕೋಟೆ ಜಿಲ್ಲಾ ಎಸ್.ಪಿ, ಮುಧೋಳ ಸಿಪಿಐ ಇವರಿಗೆ ಮಾಹಿತಿ ನೀಡಲು ಠಾಣಾಧಿಕಾರಿ ಕೋರಿದ್ದಾರೆ
Share