ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಮಗ ಮಂಡಳಿಯ ಎ ಎಲ್ ಬಿ ಸಿ ಡಿವಿಜನ್ ವ್ಯಾಪ್ತಿಯ ಇಇ ಮೋಹನ ಹಲಗತ್ತಿ: ಕಾನೂನು ಬಾಹಿರವಾಗಿ ಟೆಂಡೆರ್ ಗಳನ್ನು ಕರೆದು ಕೋಟಿ ಕೋಟಿ ಲೂಟಿ ಹೊಡೆಯುವ ಹುನ್ನಾರ

ಮುದ್ದೇಬಿಹಾಳ: ದೇಶದಲ್ಲಿ ಮಾತ್ರವಲ್ಲದೇ ರಾಜ್ಯದೆಲ್ಲೇಡೆ ಕೊರೊನಾ ವೈರಾಸ್ ನಿಂದಾಗಿ ಲಕ್ಷಾಂತರ ಜನ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದರೆ ಇತ್ತ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಮಗ ಮಂಡಳಿಯ ಎ ಎಲ್ ಬಿ ಸಿ ಡಿವಿಜನ್ ವ್ಯಾಪ್ತಿಯ ಇಇ ಮೋಹನ ಹಲಗತ್ತಿಯವರು ಕಾನೂನು ಬಾಹಿರವಾಗಿ ಟೆಂಡೆರ್ ಗಳನ್ನು ಕರೆದು ಕೋಟಿ ಕೋಟಿ ಲೂಟಿ ಹೊಡೆಯುವ ಹುನ್ನಾರ ನಡೆಸಲಾಗುತ್ತಿದೆ ಈ ಕೂಡಲೇ ಈ ಆವೈಜ್ಞಾನಿಕ ಕಾನೂನು ಬಾಹಿರವಾಗಿ ಟೆಂಡೆರ್ ಪ್ರಕ್ರೀಯೆ ಕೈಬಿಡಬೇಕು ಹೊಸದಾಗಿ ಟೆಂಡೆರ್ ಕರೆಯಬೇಕು ಎಂದು ಪ್ರಥಮ ದರ್ಜೇ ಗುತ್ತಿಗೆದಾರ ಮಲ್ಲಿಕಾರ್ಜುನ ಮದರಿ ಹಾಗೂ ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ ಒತ್ತಾಯಿಸಿದರು.
ಪಟ್ಟಣದ ಮದರಿ ಕಾಂಪ್ಲೇಕ್ಸ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೇದ ಹಲವು ವರ್ಷಗಳಿಂದ ತಾಲೂಕಿನ ಬಹುತೇಕ ಗುತ್ತಿಗೆದಾರರು ಉತ್ತಮ ಕಾರ್ಯನಿರ್ವಹಿಸುತ್ತಲೇ ಬಂದಿದ್ದೇವೆ.ಸದ್ಯ ಕೃಷ್ಣಾ ಭಾಗ್ಯ ಜಲನಿಗಮ ಮಂಡಳಿಯ ಎ ಎಲ್ ಬಿ ಸಿ ಡಿವಿಜನ್ ಗೆ ಇಇ ಆಗಿ ಮೋಹನ ಹಲಗತ್ತಿಯವರು ಯವರು ಬಂದು ಒಕ್ಕರಿಸಿದ್ದೇ ತಡ.
ತಮಗೆ ಬೇಕಾದ ಆಯ್ದ ಗುತ್ತಿಗೆದಾರರಿಗೆ ಟೆಂಡೆರ ಸಿಗುವಂತೆ ಮಾಡಿ ಅವರಿಂದ ಕೋಟಿ ಕೋಟಿ ಲೋಟಿ ಹೋಡೆಯುವ ಕಾರ್ಯಕ್ಕೆ ಕೈಹಾಕಿದ್ದಾರೆ.ಈ ಕಾರಣದಿಂದಾಗಿಯೇ ಕಳೇದ ಮಾರ್ಚ ತಿಂಗಳಲ್ಲಿ ಸುಮಾರು 35 ಕೋಟಿಗಳ ವೆಚ್ಚದಲ್ಲಿ ಎಸ್‌ಇ ಪಿ ಟಿ ಎಸ್ ಪಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳ ಮಾರ್ಚ 26 ರಂದು ಟೆಂಡೆರ ಕರೆದು ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿತ್ತು.
ಸಧ್ಯ ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ ಹೇರಿಕೆಯಾಗಿರುವುದರಿಂದ ಏಪ್ರೀಲ್ 4 ರವರೆಗೆ ಮುಂದೂಡಿ ಕಾಲಾವಕಾಶ ನೀಡಿತ್ತು, ಆದರೇ ಯಾರಿಗೂ ಗೊತ್ತಾಗದೇ ನಿಗದಿತ ಸಮಯ ನೀಡಿ ಸದ್ದು ಗದ್ದಲವಿಲ್ಲದೇ ದೀಡೀರನೇ ಟೆಂಡೆರ್ ಕರೆದು ತಮಗೆ ಬೇಕಾದವರಿಗೇ ಟೆಂಡೆರ್ ಪಡೆಯುವಂತೆ ಮಾಡಿ ಮುಕ್ತಾಯಗೊಳಿಸಿದ್ದು. ತಾಲೂಕಿನ ಬಹುತೇಕ ಎಲ್ಲ ಗುತ್ತಿಗೆದಾರರಿಗೆ ಘೋರ ಅನ್ಯಾಯಮಾಡಿದ್ದಾರೆ.
ಇದು ಹಣದ ಆಸೆ ಆಮಿಶಕ್ಕೆ ಬಲಿಯಾಗಿ ಈ ರೀತಿ ತಮ್ಮ ಕಾನೂನು ಚೌಕಟ್ಟನ್ನು ಮೀರಿ ಕಾನೂನು ಬಾಹಿರವಾಗಿ ಟೆಂಡೆರ ಕರೆದಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕೂಡಲೇ ಈಗಾಗಲೇ ಟೆಂಡರ್ ನ್ನು ರದ್ದು ಗೊಳಿಸಿ ಪುನಃ ಟೆಂಡೆರ ಕರೆಯಬೇಕು ಸರಕಾರದ ನಿಯಮಾನುಸಾರ ಯಾರು ಅರ್ಹರಿದ್ದಾರೋ ಅವರಿಗೆ ಗುತ್ತಿಗೆ ಪಡೆದು ಕಾಮಗಾರಿ ನಡೆಸುವಂತಾಗಲಿ. ಒಂದುವೇಳೆ ನಮ್ಮ ಬೇಡಿಕೆ ಇಡೇರದೇ ಇದ್ದರೇ ಆಲಮಟ್ಟಿ ಕೃಷ್ಣ ಭಾಗ್ಯ ಜಲನಿಗಮ ಮಂಡಳಿಯ ಮುಖ್ಯ ಅಭಿಹಂತರರ ಕಚೇರಿ ಎದುರು ತಾಲೂಕಾ ಗುತ್ತಿಗೆದಾರರ ಸಂಘದಿAದ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. .
ಈ ವೇಳೆ ಗುತ್ತಿಗೆದಾರರಾದ ಹಣಮಂತ ಕುರಿ, ಆರ್ ಎಂ ಚಿತ್ತಾಪೂರ, ರಾಜು ಕೊಂಗಿ, ಎಂ ಎ ಗೂಳಿ, ಬಸನಗೌಡ ಪಾಟೀಲ, ಸುರೇಶ ಪಾಟೀಲ, ಎಚ್ ಎಂ ನಾಯಕ, ಎಂ ಎಸ್ ಬೊಮ್ಮನಳ್ಳಿ, ರಾಯನಗೌಡ ತಾತರಡ್ಡಿ, ಎಚ್ ಬಿ ಸಂಗಮ, ಶ್ರೀಶೇಲ ಮರೋಳ, ಜ ಟಿ ಇಲಕಲ್ಲ, ಎಂ ಬಿ ಕೆಸರಟ್ಟಿ, ಬಸವರಾಜ ಇಸ್ಲಾಂಪೂರ, ಸಂತೋಷ ಲಮಾಣಿ, ಭಿರಪ್ಪ ಯರಝರಿ, ಮಾರುತಿ ಹೊಸೂರ, ಎಸ್ ಈ ಹಿರೇಮಠ, ವಾಯ್ಕ ಹಳಿಮನಜಿ ಸೇರಿದಂತೆ ಮತ್ತಿತರರು ಇದ್ದರು.
Share