ಮಠಕ್ಕೆ ಭೇಟಿ ನೀಡಿ ಸ್ವಾಮಿಜಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ: ಸತೀಶ್ ಜಾರಕಿಹೊಳಿ

ವರದಿ:ಕೆ.ವಾಯ್ ಮೀಶಿ
ಮೂಡಲಗಿ: ಭಾನುವಾರ ದೇಹ ತ್ಯಾಗ ಮಾಡಿರುವ ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿಗಳ ಕುಟಂಬದವರಿಗೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಸಂತಾಪ ಸಲ್ಲಿಸಿದರು.
ಬುಧವಾರ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿ ಅಮೃತಬೋಧ ಸ್ವಾಮೀಜಿ ಮತ್ತು ಶ್ರೀಧರ ಸ್ವಾಮೀಜಿಗಳಿಗೆ ಸಾಂತ್ವನ ತಿಳಿಸಿ ಮಾತನಾಡಿದ ಅವರು ‘ಪೂಜ್ಯರು ಮೂಡಲಗಿ ಭಾಗದ ಆಧ್ಯಾತ್ಮಿಕ ಶಕ್ತಿಯಾಗಿದ್ದರು. ಪೂಜ್ಯರ ಅಗಲಿಕೆಯಿಂದ ನಾಡಿನ ಭಕ್ತರಿಗೆ ಅಪಾರ ನಷ್ಟವಾಗಿದೆ’ ಎಂದರು.
ಆರ್.ಪಿ. ಸೋನವಾಲಕರ, ಮಲ್ಲಿಕಾರ್ಜುನ ಕಬ್ಬೂರ, ಪ್ರಕಾಶ ಬಾಗೇವಾಡಿ, ಪುರಸಭೆ ಸದಸ್ಯರು ಇದ್ದರು.