ಕೊರೊನಾ ವಾರಿಯರ್ಸಗೆ ರಕ್ಷಣೆ ಮತ್ತು ಪರಿಹಾರ ಕೋರಿ ಮನವಿ ಸಲ್ಲಿಸಿದ ಪೌರ ಕಾರ್ಮಿಕರು

ಅಥಣಿ: ದೇಶಾದ್ಯಂತ ಕೊರೋನಾ ಮಹಾ ಮಾರಿಯಿಂದಾಗಿ ಲಾಕ್ ಡೌನ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೌರ ಕಾರ್ಮಿಕರು ಜೀವನ ಭದ್ರತೆ ಮತ್ತು ರಕ್ಷಣೆ ಕೋರಿ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆಯ ಕಿರುಗಾವಲು ಪಂಚಾಯಿತಿ ವ್ಯಾಪ್ತಿಯ ಕಲ್ಕುಳಿ ಗ್ರಾಮಪಂಚಾಯತ ಪೌರಕಾರ್ಮಿಕರಾದ ದಿ:ಶ್ರೀ ಬಸವರಾಜು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಸಾವೀಗಿಡಾಗಿದ್ದು ಅವರ ಕುಟುಂಬಕ್ಕೆ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿ ಮತ್ತು ಆರೋಗ್ಯ ಇಲಾಖೆ ಕೊರೋನಾ ವಾರಿಯರ್ಸಗಾಗಿ ಸ್ಥಾಪಿಸಿದ ವಿಮಾನಿಧಿಯಿಂದ ಪರಿಹಾರ ಕೊಡಬೇಕು ಹಾಗೂ ಕರ್ತವ್ಯದ ವೇಳೆ ಮೃತಪಟ್ಟ ಬಸವರಾಜು ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ನಿಡುವಂತೆ ಮನವಿ ಸಲ್ಲಿಸಿದರು. ಈ ವೇಳೆ ಪೌರ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ರಕ್ಷಣೆ ಕೋರಿದ ಅಥಣಿ ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರು ಚಿಕ್ಕಮಗಳೂರು ಮುನ್ಸಿಪಾಲ್ಟಿಯಲ್ಲಿ ಕಾರ್ಯ ನಿರ್ವಹಿಸುವಾಗ ಕಾರ್ಮಿಕರ ಮೇಲೆ ನಡೆದ ಹಲ್ಲೆ ಮತ್ತು ಕೋಲಾರ ಜಿಲ್ಲೆಯ ಕೋಲಾರ ಮುನ್ಸಿಪಾಲ್ಟಿಯ ಕಾರ್ಮಿಕರ ಮೇಲೆ ನಡೆದ ಹಲ್ಲೆಗಳನ್ನು ಖಂಡಿಸಿದರಲ್ಲದೆ
ಕೊರೋನಾ ಸಂಕಷ್ಟದ ಕಾಲದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಮಿಕರ ಬಾಕಿ ವೇತನ ನೀಡುವಂತೆ ಮುಖ್ಯಮಂತ್ರಿಗಳಿಗೆ ಅಥಣಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗುತ್ತಿಗೆ ಪೌರ ಕಾರ್ಮಿಕರ ಜಿಲ್ಲಾಧ್ಯಕ್ಷ ಬಸವರಾಜ ಕಾಂಬಳೆ ಸಂಕಷ್ಟದ ಸಮಯದಲ್ಲಿ ಪ್ರಾಣ ಒತ್ತೆ ಇಟ್ಟು ಯಾವುದೇ ಸುರಕ್ಷತಾ ವಿಧಾನಗಳಿಲ್ಲದೆಯೂ ಸ್ವಚ್ಚತಾ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಜೀವನ ಭದ್ರತೆಯ ಅಗತ್ಯವಿದ್ದು ಕರ್ತವ್ಯ ನಿರತ ಸಿಬ್ಬಂದಿಯ ಮೇಲಿನ ಹಲ್ಲೆ ಅಮಾನವೀಯವಾಗಿದ್ದು ತಪ್ಪಿತಸ್ಥರ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸುವಂತಾಗಬೇಕು ಅಲ್ಲದೆ ಲಾಕ್ ಡೌನ ಸಮಯದಲ್ಲಿಯೂ ಶಿಸ್ತು ಮತ್ತು ಸಂಯಮದಿAದ ಕೆಲಸ ನೀರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಗೊಳಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪೌರಾಡಳಿತ ಇಲಾಖೆ ಸಚೀವರು ಮಾನವೀಯ ಹಸ್ತ ಚಾಚಬೇಕು ಎಂದರು.
ಈ ವೇಳೆ ಆನಂದ ಕಾಂಬಳೆ, ಅನೀಲ ಘಟಕಾಂಬಳೆ, ಸುರೇಶ್ ಪಟ್ಟಣ, ಮೆಹಬೂಬ್ ಮಹಾತ್, ಪ್ರಕಾಶ ಕುಂಬಾರ, ಮಂಜುನಾಥ ಬೆಳ್ಳಂಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.