ಹಿರೇಬಾಗೇವಾಡಿಯಲ್ಲಿ ಸಂಜೆ ಮತ್ತೆ ಮೂವರಲ್ಲಿ ಕೊರೊನಾ: 8 ವರ್ಷದ ಬಾಲಕನೂ ಸೋಂಕಿತ

ಬೆಳಗಾವಿ: ಇಂದು ಬೆಳಿಗ್ಗೆ ಹಿರೇಬಾಗೇವಾಡಿಯ ನಾಲ್ಕು ಮಂದಿ ಮಹಿಳೆಯರೂ ಸೇರಿದಂತೆ ಮೂರು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಸಂಜೆ ಬಂದಿರುವ ವರದಿಯಲ್ಲಿ ಮತ್ತೆ ಮೂವರಲ್ಲಿ ಸೋಂಕು ಕಂಡು ಬಂದಿದ್ದು, ಅವರಲ್ಲಿ ಒಬ್ಬ ಎಂಟು ವರ್ಷದ ಬಾಲಕನೂ ಸೇರಿದ್ದಾನೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 54 ಕ್ಕೆ ಏರಿಕೆಯಾಗಿದ್ದರೆ, ಹಿರೇಬಾಗೇವಾಡಿ ಒಂದೇ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 26 ತಲುಪಿದೆ. ಇಂದು ರಾಜ್ಯಾದ್ಯಂತ ಒಟ್ಟು 26 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ ಒಂಭತ್ತು ಪ್ರಕರಣಗಳು ಹಿರೇಬಾಗೇವಾಡಿ ಒಂದೇ ಗ್ರಾಮಕ್ಕೆ ಸೇರಿವೆ.
Share