ಉಚಿತ ಮಾಸ್ಕಗಳನ್ನು ವಿತರಣೆ : ಮಾಜಿ ಶಾಸಕ ಸಿ ಎಸ್ ನಾಡಗೌಡ

ಮುದ್ದೇಬಿಹಾಳ: ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಸಿ ಎಸ್ ನಾಡಗೌಡ ಅವರು ಶವಿವಾರ ಬೇಟಿ ನೀಡಿ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಮತ್ತು ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ ಅವರೊಂದಿಗೆ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಏನೆಲ್ಲ ತೊಂದರೆಗಳಿವೆ ಮತ್ತು ಹೇಗೆಲ್ಲ ಕಟ್ಟೆಚ್ಚರ ವಹಿಸಲಾಗಿದೆ ಎಂಬುದನ್ನು ಮಾಹಿತಿ ಸಂಗ್ರಿಸಿದರು.
ವೇಳೆ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ತಾಲೂಕಾ ವೈದ್ಯಾಧಿಕಾರಿಗಳಿಗೆ, ವೈದ್ಯಕಿಯ ಸಿಬ್ಭಂದಿಗಳಿಗೆ, ಪೋಲಿಸ್ ಇಲಾಖೆಯ ಸಿಬ್ಭಂದಿಗಳಿಗೆ ಮಾಸ್ಕಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಇದೋಂದು ಸಾಂಕ್ರಾಮಿಕ ವೈರಾಣುವಾಗಿದ್ದು ಇಲ್ಲಿಯತನಕವೂ ಈ ವೈರಾಣುವಿಗೆ ಚುಚ್ಚುಮದ್ದಾಗಲಿ ಅಥವಾ ಔಷಧಿಯಾಗಿ ಕಂಡು ಹಿಡಿಯವಲ್ಲಿ ಸಾಧ್ಯವಾಗಿಲ್ಲ.
ಇದು ಇಷ್ಠೆ ದಿನಕ್ಕೆ ಈ ಕೊರೊನಾ ಅಟ್ಟಹಾಸ ನಿಲ್ಲುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ ಹಾಗಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಿಯಂತ್ರಣಗೊಳಿಸುವಲ್ಲಿ ಪ್ರತಿಯೊಬ್ಬರ ಅಗತ್ಯ ಕರ್ತವ್ಯವಾಗಿದೆ ಎಂದರು.
ಈ ವೇಳೆ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಜಿ ಪಾಟೀಲ(ಶೃಂಗಾರಗೌಡ)ಎಪಿಎAಸಿ ಅಧ್ಯಕ್ಷ ಗುರು ತಾರನಾಳ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ಗೋಪಿ ಮಡಿವಾಳರ, ಕಾಮರಾಜ ಬಿರಾದಾರ, ತಾಲೂಕಾ ಕಾಂಗ್ರೇಸ್ ಯೂಥ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಪಿಂಟು ಸಾಲಿಮನಿ, ರಾಮು ಲಮಾಣಿ, ಕಾರ್ತಿಕ ನಾಡಗೌಡ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರೀಯಾಜ ಢವಳಗಿ, ಯಲ್ಲಪ್ಪ ನಾಯಕಮಕ್ಕಳ, ಸಮಿರ ದ್ರಾಕ್ಷೀ,ಸೇರಿದಂತೆ ಮತ್ತಿತರರು ಇದ್ದರು.
Share