ಬ್ರೇಕಿಂಗ್ ನ್ಯೂಸ್

ಸಿ ಎಮ್ ಪರಿಹಾರ ನಿಧಿಗೆ ಐವತ್ತು ಸಾವಿರ ಕೊಟ್ಟ ನ್ಯಾಯವಾದಿಅಥಣಿ:ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿರುವ
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೋವಿಡ್ 19 ಪರಿಹಾರ ನಿಧಿಗೆ ವೈಯುಕ್ತಿಕ ವಾಗಿ ನ್ಯಾಯವಾದಿ ಒಬ್ಬರು ಐವತ್ತು ಸಾವಿರ ಹಣ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಡಿಸಿಎಮ್ ಲಕ್ಷ್ಮಣ ಸವದಿ ಅವರಿಗೆ ಚೆಕ್ ಹಸ್ತಾಂತರ ಮಾಡುವ ಮೂಲಕ ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ ಎ ವನಜೋಳ ಮಾನವೀಯತೆ ಮೆರೆದದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊರೊನಾ ಸೊಂಕಿನಿAದಾಗಿ ಇಡೀ ಜಗತ್ತು ಬೆಚ್ಚಿಬಿದ್ದಿದ್ದು ಭಾರತ ಲಾಕ್ ಡೌನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ತ್ವರಿತಗತಿಯ ಮತ್ತು ಯುದ್ದೊಪಾದಿಯ ಕಾರ್ಯಕ್ರಮಗಳನ್ನು ರೂಪಿಸಿದ್ದು ಲಾಕ್ ಡೌನ್ ನಿಂದಾಗಿ ಹಲವೆಡೆ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಪರಿಣಾಮ ತೆರಿಗೆ ಬರದೆ ಸರ್ಕಾರಕ್ಕೆ ಕೊರೊನಾ ನೀರ್ವಹಣೆ ಹೊರೆಯಾಗುತ್ತಿರುವದರಿಂದ ಮತ್ತು ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿರುವದರಿಂದ ರಾಜ್ಯದ ಜನರ ಒಳಿತಿಗಾಗಿ ಈ ಹಣ ವಿನಿಯೋಗ ವಾಗುತ್ತದೆ ಅನ್ನುವ  ಕಾರಣಕ್ಕಾಗಿ ಡಿಸಿಎಮ್ ಲಕ್ಷ್ಮಣ ಸವದಿ ಅವರ ಮೂಲಕ ಐವತ್ತು ಸಾವಿರ ರೂಪಾಯಿಗಳ ಚೆಕ್ ಅನ್ನು ಸರ್ಕಾರಕ್ಕೆ ನೀಡಿದ್ದಾಗಿ ನ್ಯಾಯವಾದಿ ಕೆ ಎ ವನಜೋಳ ತಿಳಿಸಿದರು.
ಡಿ ಸಿ ಎಮ್ ಲಕ್ಷ್ಮಣ ಸವದಿ ಅವರ ಸ್ವಗೃಹದಲ್ಲಿ ಚೆಕ್ ಹಸ್ತಾಂತರ ಮಾಡುವಾಗ ನ್ಯಾಯವಾದಿಗಳಾದ
ಎಸ್ ಕೆ ಸವದಿ,ಆರ್ ಎಮ್ ಭೊಸಲೆ,ಡಿ.ಬಿ ಠಕ್ಕನ್ನವರ, ಮತ್ತು ಬಿ ಬಿ ಬಿಸಲಾಪೂರ ಉಪಸ್ಥಿತರಿದ್ದರು

About the author

admin