ಕೊರೋನಾ ವಾರಿಯರ್ಸಗೆ ಸನ್ಮಾನ

ಕೊರೋನಾ ವಾರಿಯರ್ಸಗೆ ಸನ್ಮಾನ

ನಾಗನೂರ ಪಿ.ಕೆ: ಸಮೀಪದ ಹಲ್ಯಾಳ ಗ್ರಾಮದ ಶ್ರೀ ಗುರುಶಿದ್ದೇಶ್ವರ ಸಭಾಭವನದಲ್ಲಿ ಕೋವಿಡ-19 ಮಹಾಮಾರಿ ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿರುವ ವೈದ್ಯಾಧಿಕಾರಿಗಳು, ಪೋಲೀಸರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತÀ ಸಿಬ್ಬಂದಿ ವರ್ಗದವರ ಸೇವೆ ಶ್ಲಾಘನೀಯ.ಅದೇ ತೆರನಾಗಿ ಹಲ್ಯಾಳ ಗ್ರಾಮದಲ್ಲಿ ಅವಿರತ ಸೇವೆ ನೀಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಹಲ್ಯಾಳದ ವೈದ್ಯಾಧಿಕಾರಿಗಳಾದ ಪ್ರವೀಣ ದಬದಾಬಟ್ಟಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೆ ಹಲ್ಯಾಳದ ಗ್ರಾಮ ಪಂಚಾಯತ ಸದಸ್ಯರಾದ ಶಿವಾನಂದ ಇಂಗಳಿ ಅವರು ಸನ್ಮಾನ ಮಾಡಿದರು.
ಈ ಸಂಧರ್ಬದಲ್ಲಿ ಗುರುಶಿದ್ದೇಶ್ವರ ಮಹಾಸ್ವಾಮಿಗಳು, ಯಲ್ಲಾಲಿಂಗ ಪಾಟೀಲ, ಪ್ರವೀಣ ದಬದಾಬಟ್ಟಿ, ಸುರೇಶ ಜಾದವ, ಶಿವಬಸು ನಾಯಿಕ, ಜ್ಯೋತಿ ಚೌಗಲಾ, ಬಿ ಎಮ್ ಪಾಟೀಲ ಮತ್ತು ಎಲ್ಲ ಪೌರಕಾರ್ಮಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು
Share