ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತ ಕೆಲಸ

ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತ ಕೆಲಸ

ಅರಟಾಳ ; ಕರೊನಾ ನಿಯಂತ್ರಿಸಲು ಹೇರಿರುವ ಲಾಕ್ ಡೌನ್‌ನಿಂದ ಕೆಲಸ ಕಳೆದುಕೊಂಡಿರುವ ಕೂಲಿ ಕಾರ್ಮಿಕರಿಗೆ ಈಗ ನರೇಗಾ ಯೋಜನೆಯಲ್ಲಿ ಗ್ರಾಮ ಪಂಚಾಯತ ಕೆಲಸವನ್ನು ಕೊಡುತ್ತಿದೆ ಎಂದು ತಾಪಂ ಇಒ ರವಿಂದ್ರ ಬಂಗಾರೇಪನ್ನವರ ಹೇಳಿದರು.
ಅವರು ಶನಿವಾರ ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಕೆಲಸ ಆರಂಭಿಸುವAತೆ ಸ್ಥಳೀಯ ಗ್ರಾಪಂ ಭೇಟಿ ನೀಡಿ ಮಾತನಾಡಿ, ಅರಟಾಳದಲ್ಲಿ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಾರೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಸರ್ಕಾರ ಕೊಡುತ್ತದೆ. ಸರ್ಕಾರ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಗುಂಪು ಗುಂಪಾಗಿ ಕೆಲಸ ಮಾಡಲು ಅವಕ್ಕಾಶ ವಿತ್ತು. ಆದರೆ ಈಗ ಕರೊನಾ ವೈರಸ್ ಹಾವಳಿಯಿಂದ ಮುಂಜಾಗೃತವಾಗಿ ಎಲ್ಲರು ಅಂತರ ಕಾಯ್ದಯದುಕೊಳ್ಳಬೇಕು ಎಂದು ಕಾರ್ಮಿಕರಿಗೆ ತಿಳಿಸಿ. ಕಾಯಕಬಂಧುಗಳು ಕೂಲಿ ಕಾರ್ಮಿಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ತಾಪA ಸದಸ್ಯ ಶಿವಪ್ಪ ಹಟ್ಟಿ ಮಾತನಾಡಿ, ಗ್ರಾಮದಲ್ಲಿ ನರೇಗಾ ಕೆಲಸ ಪ್ರಾರಂಭವಾಗಿದೆ ಎಂದು ಗೋತ್ತಾದರೆ ಸಾಕು ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಕೆಲಸ ಆರಂಭದಿAದ ಮುಗಿಯುವ ವರೆಗೆ ಗ್ರಾಮ ಪಂಚಾಯತ ಅಧಿಕಾರಿಗಳು ಯಾವುದೇ ಸಮಸ್ಯ ಬರದಂತೆ ನೋಡಿಕೊಳ್ಳಬೇಕು. ಕಾರ್ಮಿಕರು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ ಎಂದರು.
ಕಾರ್ಯದರ್ಶಿ ಜೀತೇಂದ್ರ ಗದಾಡೆ, ತಾಪಂ ನರೇಗಾ ಸಹಾಯಕ ನಿರ್ಧೇಶಕರು ಅರುಣ ಮಾಚಕನೂರ, ತಾಪಂ ಸಿಬ್ಬಂದಿ ವಿಶ್ವನಾಥ ಮೋರೆ, ಗ್ರಾಪಂ ಸದಸ್ಯ ಹಣಮಂತ ಪೂಜಾರಿ, ಶ್ರೀಶೈಲ ಪೂಜಾರಿ, ಕುಮಾರ ಪಾಟೀಲ, ಈಶ್ವರ ಬಡಿಗೇರ ಇದ್ದರು

Share