ಆರ್ಥಿಕ ನಷ್ಟ ತೂಗಿಸಲು ಸರ್ಕಾರಕ್ಕೆ ಸಲಹೆ ನೀಡಿದ ವಿಕಲಚೇತನ

ಆರ್ಥಿಕ ನಷ್ಟ ತೂಗಿಸಲು ಸರ್ಕಾರಕ್ಕೆ ಸಲಹೆ ನೀಡಿದ ವಿಕಲಚೇತನ


ಅಥಣಿ: ರಾಜ್ಯ ಸರ್ಕಾರ ಸದ್ಯ ಮೇ ನಾಲ್ಕರಿಂದ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲು ಮುಂದಾಗಿದೆ ಈ ಬಗ್ಗೆ ಮಾಹಿತಿ ಲಭ್ಯವಾಗಿವೆ ಒಂದು ಕಡೆ ಕುಡುಕರು ಖುಷಿ ಪಡುತ್ತಿದ್ದು ವೈನ್ ಶಾಪ್ ಮಾಲೀಕರು ಮಾರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗುತ್ತಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟ ಮಾಡಲು ಸಮಯ ನಿಗದಿ ಮಾಡಿದರೂ ಕೂಡ ನಿಯಮಗಳ ಪಾಲನೆ ಆಗುವ ಬಗ್ಗೆ ಹಲವು ಅನುಮಾನಗಳು ಉದ್ಭವಿಸಿರುವ ನಡುವೆಯೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ಒಂದುವರೆ ತಿಂಗಳ ಅವಧಿಯಲ್ಲಿ ಬಂದ್ ಮಾಡಿದ್ದ ಮದ್ಯ ಮಳಿಗೆಗಳು ಬಂದ್ ಆಗಿದ್ದರಿಂದ ಮದ್ಯ ವ್ಯಸನಿಗಳು ಕೂಡ ತಮ್ಮ ವ್ಯಸನ ಮರೆತು ತಮ್ಮ ಕುಟುಂಬ ಸದಸ್ಯರ ಜೊತೆಗೆ ಅನ್ಯೋನ್ಯ ವಾಗಿ ಇದ್ದಾರೆ ಆದರೆ ಸರ್ಕಾರ ಬಡ ಕುಟುಂಬಗಳ ಸಂತಸ ಕಸಿಯಲು ಮುಂದಾಗಿದೆ ಆದರೆ ಮಹಾರಾಷ್ಟ್ರದಿಂದ ಕಳ್ಳ ಮಾರ್ಗದಿಂದ ಮದ್ಯ ತಂದು ಅಕ್ರಮವಾಗಿ ಕಾಳ ಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಿದ್ದಾರೆ. ವಿಕಲಚೇತನ ರಮೇಶ್ ನಾಯಕ ಅಥಣಿ ತಾಲ್ಲೂಕು ದಂಢಾಧಿಕಾರಿ ದುಂಡಪ್ಪ ಕೋಮಾರ್ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿದ್ದಾರೆ.
ಈ ಮೂಲಕ ವಿಕಲಚೇತನ ವ್ಯಕ್ತಿಯೊಬ್ಬರು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಸರ್ಕಾರಕ್ಕೆ ಆಗಿರುವ ನಷ್ಟ ಭರಿಸಿಕೊಳ್ಳಲು ಸಲಹೆ ನೀಡಿದ್ದಲ್ಲದೇ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹ ಮಾಡಿ ಗಮನ ಸೆಳೆದಿದ್ದಾರೆ.
ಇನ್ನು ಮದ್ಯ ಮಾರಾಟ ಸಂಪೂರ್ಣ ನಿಷೇಧ ಆಗುವವರೆಗೆ ಚಪ್ಪಲಿ ಧರಿಸುವದಿಲ್ಲ ಎಂದು ದೇವರಿಗೆ ಹರಕೆ ಹೊತ್ತಿರುವದಾಗಿ ತಿಳಿಸಿದ್ದು ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ತೆರಿಗೆ ಹಣ ಬರುತ್ತಿದ್ದು ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತದೆಯಾ ಅಂತ ಕಾಯ್ದು ನೋಡಬೇಕಿದೆ.
ತಹಶಿಲ್ದಾರಗೆ ಮನವಿ ಸಲ್ಲಿಸುವ ವೇಳೆ
ವೃಷಭ ಹರಳೆ, ಮಹೆಶ್ ಖಾಂಡೇಕರ, ಅಜೀತ್ ನಾಯಕ, ಮತ್ತು ಇತರರು ಉಪಸ್ಥಿತರಿದ್ದರು
Share
WhatsApp
Follow by Email