ಸರಕಾರ ಮದ್ಯ ಮಾರಾಟಕ್ಕೆ ಅಸ್ತು, ಮಧ್ಯ ಪ್ರಿಯರಿಗೆ ಹರುಷ,

ಸರಕಾರ ಮದ್ಯ ಮಾರಾಟಕ್ಕೆ ಅಸ್ತು, ಮಧ್ಯ ಪ್ರಿಯರಿಗೆ ಹರುಷ,

ಬೆಳಗಾವಿ: ಕೋವಿಡ್ -19 ನಿಧಾನವಾಗಿ ಸರಿದುಕೊಳ್ಳುತ್ತಿರುವ ಬೆನ್ನಲ್ಲೇ ಸರಕಾರ ಮದ್ಯ ಮಾರಾಟಕ್ಕೆ ಅಸ್ತು ಎಂದಿದೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲ. ಆದರೆ, ಮದ್ಯ ಮಾರಾಟ ಹಾಗೂ ಮದ್ಯ ಖರೀದಿ ಮಾಡಬೇಕಾದರೆ ಕೆಲ ನಿಯಮ ಪಾಲನೆ ಮಾಡಬೇಕಾಗಿರುವುದರನ್ನು ಸರಕಾರ ಸೂಚಿಸಿದೆ.



ಈ ಬಗ್ಗೆ  ಅಬಕಾರಿ ಆಯುಕ್ತರು ನೀಡಿದ ಸೂಚನೆಯ ಸಾರಾಂಶ ಹೀಗಿದೆ. ಕರ್ನಾಟಕ ರಾಜ್ಯ  ಕರ್ನಾಟಕ ಅಬಕಾರಿ ಕಾಯ್ದೆ , 1965 ರ ಕಲಂ 21 ( 1 ) ಮತ್ತು 3 ( 2 ) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕೇವಲ ಮದ್ಯ ಮಾರಾಟ ಸನ್ನದುಗಳಾದ ಸಿಎಲ್ – 2 ಮತ್ತು ಸಿಎಲ್ 11 – ಸಿ [ ಎಂ . ಎಸ್ . ಐ . ಎಲ್ ಮದ್ಯ ಮಳಿಗೆಗಳು ] ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆ . ಎಸ್ . ಬಿ . ಸಿ . ಎಲ್ ಡಿಪೋಗಳು ದಿನಾಂಕ : 04 . 05 . 2020 ರಿಂದ ಕಾರ್ಯ ನಿರ್ವಹಿಸಲು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಆದೇಶಿಸಿದ್ದಾರೆ.ಮುಂದುವರೆದು ಈ ಅವಧಿಯಲ್ಲಿ ಆದೇಶದಲ್ಲಿ ತಿಳಿಸಲಾದ  ಮಾರಾಟ ಸನ್ನದುಗಳನ್ನು ಹೊರತುಪಡಿಸಿ ಇತರೆ ಯಾವುದೇ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ . 


ಷರತ್ತುಗಳು 


1 . ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಜಿಲ್ಲಾಡಳಿತ / ಸ್ಥಳೀಯ ಸಂಸ್ಥೆಗಳು ಘೋಷಿಸಿರುವ Containment Zones ಗಳಲ್ಲಿ ಯಾವುದೇ ಮದ್ಯ ಮಾರಾಟ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ . 


2 . ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಜಿಲ್ಲಾಡಳಿತ / ಸ್ಥಳೀಯ ಸಂಸ್ಥೆಗಳು ಘೋಷಿಸಿರುವ Containment Zones ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಮಾತ್ರವೇ ಸಿಎಲ್ – 2 ಮತ್ತು ಸಿಎಲ್ 11 – ಸಿ [ ಎಂ . ಎಸ್ . ಐ . ಎಲ್ ಮದ್ಯ ಮಳಿಗೆಗಳು ] ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆ . ಎಸ್ . ಬಿ . ಸಿ . ಎಲ್ ಡಿಪೋಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಿದೆ . 


3 . ಹೀಗೆ ಕಾರ್ಯನಿರ್ವಹಿಸುವ ಸನ್ನದುಗಳು ಆದೇಶಿತ ಅವಧಿಯಲ್ಲಿ ಬೆಳಗ್ಗೆ 9 . 00 ಗಂಟೆಯಿಂದ ಸಂಜೆ 7 . 00 ಗಂಟೆಯವರೆಗೆ ಮಾತ್ರವೇ ಕಾರ್ಯನಿರ್ವಹಿಸುವುದು .


4 . ಉಲ್ಲೇಖಿತ 2ರ ಆದೇಶದಲ್ಲಿ ತಿಳಿಸಲಾದಂತೆ ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆಯು ಹಾಗೂ ಅವರುಗಳು ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು . 


5 . ಮದ್ಯ ಮಾರಾಟ ಮಾಡುವ ಸನ್ನದಿನಲ್ಲನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು Mask ಗಳನ್ನು ಹಾಕಿಕೊಳ್ಳುವುದನ್ನು ಕಡ್ಡಾಯಪಡಿಸಿಕೊಂಡು ಸನ್ನದು ಸ್ಥಳದಲ್ಲಿ ಸ್ಯಾನಿಟೈಸರ್‌ಗಳ ಬಳಸುವುದು . 


6 . ಕೇವಲ Stand alone ಸಿಎಲ್ – 2 ಹಾಗೂ ಪಿಎಲ್ 11 – ಸಿ ಸನ್ನದುಗಳನ್ನು ನ್ನು ಮಾತ್ರವೇ ಕಾರ್ಯನಿರ್ವಹಿಸುವುದು , ಮಾಲ್‌ಗಳು ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಸ ಈ ಅನುಮತಿ ಅನ್ವಯವಾಗುವುದಿಲ್ಲ . 


ಮೇಲೆ ತಿಳಿಸಲಾದ ಷರತ್ತುಗಳೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಅನ್ವಯಿಸುವ ತತ್ಸಂಬಂಧ ನಿಯಮಗಳನ್ನೂ ಕೂಡ ಪಾಲಿಸುವುದು . ಈ ಆದೇಶವನ್ನು ಅಬಕಾರಿ ಉಪ ಆಯುಕ್ತರುಗಳು ಪರಿಪೂರ್ಣವಾಗಿ ಜಾರಿ ಮಾಡುವುದು . ಆದೇಶ ಉಲ್ಲಂಘಿಸುವ ಸನ್ನದುಗಳನ್ನು ಅಮಾನತ್ತು / ರದ್ದುಪಡಿಸಲು ಕ್ರಮ ಜರುಗಿಸುವುದು .
Share
WhatsApp
Follow by Email