ಪೊಲೀಸರಿಗೆ ತಂಪು ಕನ್ನಡಕ ನೀಡಿ ಗೌರವ

ಪೊಲೀಸರಿಗೆ ತಂಪು ಕನ್ನಡಕ ನೀಡಿ ಗೌರವ

ಮೂಡಲಗಿ: ಕೊರೊನಾ ಸೋಂಕು ಹರಡದಂತೆ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಕಾನೂನು ರಕ್ಷಣೆ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮೂಡಲಗಿಯ ಪೊಲೀಸ್ ಸಿಬ್ಬಂದಿಯವರಿಗೆ ಇಲ್ಲಿಯ ಶ್ರೇಯಾ ಆಪ್ಟಿಕಲ್ಸ್ ಮತ್ತು ಐ ಕೇರ್‌ದವರು ತಂಪು ಕನ್ನಡಕವನ್ನು ನೀಡಿ ಗೌರವಿಸಿದರು.
ಶ್ರೇಯಾ ಆಪ್ಟಿಕಲ್ಸ್ ಮಾಲೀಕರಾದ ಸುಧಾಕರ ಪರಶುರಾಮ ಸಂಬರಗಿ ಮಾತನಾಡಿ ‘ಬಿಸಲಿನ ತಾಪದಿಂದ ರಕ್ಷಿಸಿಕೊಳ್ಳಲು ಪೊಲೀಸ ಸಿಬ್ಬಂದಿಯವರಿಗೆ ನಮ್ಮ ಅಳಿಲು ಸೇವೆಯಾಗಿದೆ’ ಎಂದರು.
ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಸೇರಿದಂತೆ ಪೊಲೀಸ್ ಸಿಬ್ಬಂದಿಯವರು ದಾನಿಗಳಾದ ಸುಧಾರಕ ಸಂಬರಗಿ ಅವರನ್ನು ಅಭಿನಂದಿಸಿದರು.
ಚಿತ್ರಕಲಾ ಶಿಕ್ಷಕ ಸುಭಾಷ ಕುರಣಿ, ತುಕಾರಾಮ ಚಿಕ್ಕೋಡಿ ಇದ್ದರು.
Share