ವಿಶ್ವ ಅಮ್ಮನ ದಿನ ಪ್ರಯುಕ್ತ ಕವನ

-ನಿನ್ನ ಪ್ರೀತಿಕಡಲ ರೀತಿ-

ಅಮ್ಮ ನಿನ್ನ ಮಡಿಲಿನಲ್ಲಿ
ಮತ್ತೆ ಮತ್ತೆ ಮಲಗುವೆ
ನಿನ್ನ ಪ್ರೀತಿ ಮಡುವಿನಲ್ಲಿ
ಮಿಂದು ಮಿಂದುಕರಗುವೆ
ಹೊತ್ತು ಹೆತ್ತು ಹರಸಿ ಹಾಡಿ
ಎದೆಯಜೇನು ಉಣಿಸಿದೆ
ಕಷ್ಟ ಸಹಿಸಿ ಇಷ್ಟ ಸರಿಸಿ
ಬೆಟ್ಟದಂತೆ ಬೆಳೆಸಿದೆ
ಮಮತೆಯಿಂದ ಮನಸ ಕಟ್ಟಿ
ನನಗೆ ಪಾಠ ಕಲಿಸಿದೆ
ರೀತಿ ನೀತಿಧಾರೆಎರೆದು
ಮನುಜನಾಗಿ ಮಾಡಿದೆ
ಜನುಮಜನುಮದಲ್ಲೂತಾಯೆ
ನಿನ್ನಒಡಲ ಸೇರುವೆ
ನಿನ್ನ ಪ್ರೀತಿಕಡಲ ರೀತಿ
ದಿವ್ಯಭವ್ಯವಾಗಿದೆ

-ಸಿದ್ರಾಮ ದ್ಯಾಗಾನಟ್ಟಿ-