ಮಹಿಳಾ ಸಂಘದಿಂದ ಮದ್ಯದಂಗಡಿ ತೆರವಿಗೆ ಆಗ್ರಹ  ಪ್ರತಿನಿತ್ಯ ಹೆಂಡತಿ, ಮಕ್ಕಳು ಉಪವಾಸ | ಕುಡಿದು ಮಹಿಳೆಯರಿಗೆ, ಮಕ್ಕಳಿಗೆ ನಿಂದನೆ

ಮಹಿಳಾ ಸಂಘದಿಂದ ಮದ್ಯದಂಗಡಿ ತೆರವಿಗೆ ಆಗ್ರಹ ಪ್ರತಿನಿತ್ಯ ಹೆಂಡತಿ, ಮಕ್ಕಳು ಉಪವಾಸ | ಕುಡಿದು ಮಹಿಳೆಯರಿಗೆ, ಮಕ್ಕಳಿಗೆ ನಿಂದನೆ

ಸವದತ್ತಿ : ಲಾಕ್‌ಡೌನ್ ಸಡಿಲಿಕೆಯಾಗಿ ಮದ್ಯದಂಗಡಿಗಳು ಪ್ರಾರಂಭವಾದಾಗಿನಿAದ ಕುಡಿದ ಅಮಲಿನಲ್ಲಿ ಮಹಿಳೆಯರನ್ನು ಹಿಂಸಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಮಹಿಳೆಯರಿಗೆ ಬದ್ರತೆಯಿಲ್ಲದಾಗಿ ನೆಮ್ಮದಿ ಕಸಿದಂತಾಗಿದೆ. ಕೂಡಲೇ ತಾಲೂಕಿನ ಉಗರಗೋಳದಲ್ಲಿನ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಆದಿಶಕ್ತಿ ಮಾತಂಗಿ ದೇವಿ ಮಹಿಳಾ ಸಂಘದಿAದ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದಲ್ಲಿ 2 ಮದ್ಯದಂಗಡಿಗಳಿವೆ. ನಿತ್ಯ ಕುಡಿದು ಬರುವ ಪತಿ ಮತ್ತು ಮಕ್ಕಳಿಂದ ಹಿಂಸೆ ಅನುಭವಿಸುವಂತಾಗಿದೆ. ಈ ಲಾಕ್ಡೌನ್ ಮಧ್ಯ ಆರ್ಥಿಕವಾಗಿ ತೊಂದರೆಯಾದರೂ ಕುಟುಂಬದಲ್ಲಿ ಕಲಹವಿರಲಿಲ್ಲ. ಮದ್ಯದಂಗಡಿ ಆರಂಭವಾದಾಗಿನಿAದ ಪರಿಸ್ಥಿತಿ ಹೇಳತೀರದ್ದಾಗಿದೆ. ಪಾನಮತ್ತರು ಮನೆಗೆ ಬಂದು ತಾಯಿ ಮತ್ತು ಹೆಂಡತಿಯರನ್ನು ಪೀಡಿಸುತ್ತಿದ್ದಾರೆ. ಪ್ರತಿನಿತ್ಯ ಹೆಂಡತಿ, ಮಕ್ಕಳು ಉಪವಾಸ ಬೀಳುವಂತಾಗಿದೆ. ರಸ್ತೆಯಲ್ಲಿ ನಡೆದಾಡುವ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಕುಡಿದ ಅಮಲಿನಲ್ಲಿ ಅವಾಚ್ಯಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿದೆ.
ಇದಲ್ಲದೇ ಈ ಮದ್ಯದಂಗಡಿಗಳು ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನ, ಮಠ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯಂತ ಸಮೀಪದಲ್ಲಿರುವದರಿಂದ ಎಲ್ಲರಿಗೂ ಅಲಸ್ಯವೆನಿಸುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಅಧಿಕಾರಿಗಳೇ ಈ ರೀತಿ ನಿರ್ಲಕ್ಷö್ಯ ವಹಿಸಿದಲ್ಲಿ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚಿರಿಸಿ ಕಾರಣ ಕೂಡಲೇ ಮದ್ಯದಂಗಡಿಗಳನ್ನು ಬಂದ್ ಮಾಡಿ ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವೆಂದು ಮನವಿ ಸಲ್ಲಿಸಿದರು.
ಈ ವೇಳೆ ದುರಗವ್ವ ಮ್ಯಾಗೇರಿ, ರೇಣವ್ವ ಬಡೆಪ್ಪನವರ, ದ್ರಾಕ್ಷಾಯಣಿ ಬಸಲಿಂಗನವರ, ಮಹಾದೇವಿ ಕಾಳಪ್ಪನವರ, ರೇಣುಕಾ ಮ್ಯಾಗೇರಿ, ಅನುಸೂಯಾ ಬಸಲಿಂಗನವರ, ಕಸ್ತೂರೆವ್ವಾ ಕೋಟೂರ, ಪಾರ್ವತೆವ್ವ ಹೊಸಮನಿ ಇದ್ದರು.
Share
WhatsApp
Follow by Email