ಕೊರೊನಾ : ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3722 ಪ್ರಕರಣ ಪತ್ತೆ, 134 ಮಂದಿ ಸಾವು

ಕೊರೊನಾ : ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3722 ಪ್ರಕರಣ ಪತ್ತೆ, 134 ಮಂದಿ ಸಾವು

ನವದೆಹಲಿ:ಕಳೆದ 24ಗಂಟೆಯಲ್ಲಿ 3,722 ಕೋವಿಡ್ 19 ವೈರಸ್ ನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 134 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೋವಿಡ್ 19 ವೈರಸ್ ತಗುಲಿದವರ ಸಂಖ್ಯೆ 78,003ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
49,219 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 2,549 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಭಾರತದಲ್ಲಿ 26,234 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ಸಚಿವಾಲಯ ವಿವರಿಸಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ 19 ವೈರಸ್ ಪ್ರಕರಣ ಮಿತಿಮೀರಿದ್ದು, 25,922 ಪ್ರಕರಣಗಳು ಪತ್ತೆಯಾಗಿದೆ. ಗುಜರಾತ್ ನಲ್ಲಿ 9,267, ತಮಿಳುನಾಡಿನಲ್ಲಿ 9,227 ಪ್ರಕರಣ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 975ಕ್ಕೆ ಏರಿಕೆಯಾಗಿದೆ.
Share