ಮಾಳಿಂಗರಾಯ ಗುಡಿಯ ಮಳಿಗೆ ಉದ್ಘಾಟನಾ ಸಮಾರಂಭ

ಮಾಳಿಂಗರಾಯ ಗುಡಿಯ ಮಳಿಗೆ ಉದ್ಘಾಟನಾ ಸಮಾರಂಭ


ರಬಕವಿ-ಬನಹಟ್ಟಿ : ಬನಹಟ್ಟಿ ನಗರದ ಮಾಳಿಂಗರಾಯನ ಗುಡಿಯ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿದ್ದು, ಶುಭ ಮುಹೂರ್ತದ ಪ್ರಕಾರ ಕುರುಬ ಸಮಾಜದ ಹಿರಿಯರು ಸರ್ಕಾರದ ಆದೇಶದಂತೆ ಮಳಿಗೆಗಳ ಉದ್ಘಾಟನೆ ನೇರವೇರಿಸಿದರು.
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹರಡುತ್ತಿದ್ದು ಇದರಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕಡ್ಡಾಯವಾಗಿ ಮಾಸ್ಕ ಧರಿಸಿ ಎಂದು ಉತ್ತಮ ಸಲಹೆ ನೀಡಿ ಮುಂದಿನ ದಿನಮಾನಗಳಲ್ಲಿ ಸಮುದಾಯ ಮಂಟಪ ನಿರ್ಮಾಣ ಮಾಡುವಲ್ಲಿ ನಮ್ಮ ಪಕ್ಷದ ಎಲ್ಲಾ ಸೌಲಭ್ಯಗಳನ್ನು ತರುವಲ್ಲಿ ನಾನು ನಿಮ್ಮ ಜೊತೆಗೆ ಶ್ರಮಿಸುತ್ತೆನೆ ಎಂದು ರಬಕವಿಯ ಖ್ಯಾತ ನೇತ್ರತಜ್ಞರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ ಹೇಳಿದರು.
ಈ ಹಿಂದಿನ ಸರ್ಕಾರದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಇದ್ದಾಗ ಮತ್ತು ತೇರದಾಳ ಮತಕ್ಷೇತ್ರದ ಶಾಸಕರು ಮತ್ತು ಸಚಿವರು ಶ್ರೀಮತಿ ಉಮಾಶ್ರೀ ರವರು ಇರುವ ಸಂದರ್ಭದಲ್ಲಿ ಶ್ರೀ ಮಾಳಿಂಗರಾಯನ ಗುಡಿಯ ಜಿರ್ಣೋದ್ದಾರಕ್ಕೆ ಸುಮಾರು 10ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ ಸರಕಾರಕ್ಕೆ ಶಂಕರ ಸೊರಗಾಂವಿ ಅಭಿನಂದನೆ ಹೇಳಿದರು
Share