ಮುಗಳಖೋಡ ಶ್ರೀ ಯಲ್ಲಾಲಿಂಗೆಶ್ವರ ಮಠದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೆಬ್ಬಳ್ಳಿ ಮಹಾರಾಜಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದಲ್ಲಿ ಹೆಬ್ಬಳ್ಳಿ ಮಹಾರಾಜರು (40) ಮಾನಸಿಕ ಅಸ್ವಸ್ಥತೆಯಿಂದ ಮಠದ ಕೋಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ದಿ: 13 ರಂದು ಮುಗಳಖೋಡದಲ್ಲಿ ನಡೆದಿದೆ. ಇವರು ಹೆಬ್ಬಳ್ಳಿದವರು ಕಳೆದ ಒಂದು ವರ್ಷದಿಂದ ಮುಗಳಖೋಡ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಬಂದು ನೆಲೆಸಿದ್ದು, ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ಚೀಟಿ ಕೊಡುತ್ತಾ ಕಂತಿ ಭಿಕ್ಷಾಟಣೆ ಮಾಡುತ್ತಾ ಮಠದಲ್ಲಿ ಸೇವೆ ಮಾಡುತ್ತಾ ವಾಸವಾಗಿದ್ದರು.
ಶ್ರೀ ಯಲ್ಲಾಲಿಂಗೇಶ್ವರ ಮಠದ ವ್ಯವಸ್ಥಾಪಕರು ಹಾರೂಗೇರಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಭೇಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ