ಕುಡಚಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸ್ಕಾಂ ಸಿಬ್ಬಂದಿಗೆ ಶಾಸಕ ಪಿ.ರಾಜೀವ ಅವರು ಕೊರೋನಾ ರಕ್ಷಾ ಕವಚ ವಿತರಣೆ

ಕುಡಚಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸ್ಕಾಂ ಸಿಬ್ಬಂದಿಗೆ ಶಾಸಕ ಪಿ.ರಾಜೀವ ಅವರು ಕೊರೋನಾ ರಕ್ಷಾ ಕವಚ ವಿತರಣೆ


ರಾಯಬಾಗ : ಕೊರೋನಾ ರೇಡ್‌ಝೊನದಲ್ಲಿ ಇರುವ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಸ್ಕಾಂ ಸಿಬ್ಬಂದಿಗೆ ಶಾಸಕ ಪಿ.ರಾಜೀವ ಅವರು ಕೊರೋನಾ ರಕ್ಷಾ ಕವಚ ನೀಡಿದರು.
ರಾಯಬಾಗ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರಾದ ಆನಂದ ನಾಯಿಕ ಅವರು ಮಾತನಾಡಿ ಕೊರೋನಾದಿಂದ ಸಂಪೂರ್ಣ ಸೀಲ್‌ಡೌನ್‌ವಾಗಿರುವ ಕುಡಚಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀಟರ್ ರೀಡರ ಹಾಗೂ ಲೈನ್‌ಮೇನ್ ಅವರಿಗೆ ಶಾಸಕರಾದ ಪಿ.ರಾಜೀವ ಅವರು ರಕ್ಷಾ ಕವಚ ನೀಡಿದ್ದಾರೆ ಅವರ ಒಂದು ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೆನೆ ಅದೇರೀತಿ ಕೊರೋನಾ ಲಾಕಡೌನ ಸಮಯದಲ್ಲಿ ಕುಡಚಿ ಶಾಸಕ ಪಿ.ರಾಜೀವ ಹಾಗೂ ರಾಯಬಾಗ ಶಾಸಕರಾದ ಡಿ.ಎಂ.ಐಹೊಳೆ ಅವರು ನಮ್ಮ ಇಲಾಖೆಗೆ ನಿರಂತರ ಸಹಾಯ, ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವ ಈ ಇಬ್ಬರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ರಾಯಬಾಗ, ಹಾರೂಗೇರಿ, ಕುಡಚಿಯ ವಲಯದ ಎಲ್ಲಾ ಹೆಸ್ಕಾಂ ಸಿಬ್ಬಂದಿಗಳು ಕೋವಿಡ್-19 ಸಮಯದಲ್ಲಿ ಒಳ್ಳೆಯ ರೀತಿಯವಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನಿಯವಾಗಿದೆ, ರಾಯಬಾಗ ತಾಲೂಕಿನಾದ್ಯಂತ ನಿರಂತರ ವಿದ್ಯುತ್ ನೀಡುತ್ತಿದ್ದೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಆನಂದ ನಾಯಿಕ, ಮಹೇಶ ಪಾತರವಾಟ ಸೇರಿದಂತೆ ಹೆಸ್ಕಾಂ ಸಿಬ್ಬಂದಿವರ್ಗದವರು ಹಾಜರಿದ್ದರು
Share