ಹಾರೂಗೇರಿ ಪಟ್ಟಣದ ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಸುಮಾರು 25 ಸಾವಿರ ಜೀವನಾವಶ್ಯಕ ಆಹಾರ ಧಾನ್ಯ ವಸ್ತುಗಳ ಕಿಟ್‌ಗಳನ್ನು ವಿತರಣೆ : ಮಹೇಶ ತಮ್ಮನ್ನವರ

ಹಾರೂಗೇರಿ ಪಟ್ಟಣದ ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಸುಮಾರು 25 ಸಾವಿರ ಜೀವನಾವಶ್ಯಕ ಆಹಾರ ಧಾನ್ಯ ವಸ್ತುಗಳ ಕಿಟ್‌ಗಳನ್ನು ವಿತರಣೆ : ಮಹೇಶ ತಮ್ಮನ್ನವರ


ರಾಯಬಾಗ : ಲಾಕಡೌನದ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಯಬಾಗ ಹಾಗೂ ಕುಡಚಿ ವಿಧಾನಸಭೆಯ ವ್ಯಾಪ್ತಿಯ ಬಡವರಿಗೆ, ನಿರ್ಗಗತಿಕರಿಗೆ ಹಾಗೂ ಅಲೇಮಾರಿ ಜನಾಂಗದ ಜನರಿಗೆ ತಾಲೂಕಿನ ಹಾರೂಗೇರಿ ಪಟ್ಟಣದ ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಸುಮಾರು 25 ಸಾವಿರ ಜೀವನಾವಶ್ಯಕ ಆಹಾರ ಧಾನ್ಯ ವಸ್ತುಗಳ ಕಿಟ್‌ಗಳನ್ನು ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಯುವ ಧುರೀಣ ಮಹೇಶ ತಮ್ಮನ್ನವರ ಹೇಳಿದರು.
ಗುರುವಾರ ತಾಲೂಕಿನ ನಸಲಾಪೂರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ನಸಲಾಪೂರ, ಕೆಂಪಟ್ಟಿ, ನಂದಿಕುರಳಿ, ಮೇಖಳಿ, ಬಾವಚಿ ಗ್ರಾಮಗಳ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಜೀವನಾವಶ್ಯಕ ವಸ್ತುಗಳ ಕೀಟ್‌ಗಳನ್ನು ವಿತರಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಮಾತ್ರ ಜನರ ಕಷ್ಟ ಕೇಳುವ ನಾಟಕ ಮಾಡಬಾರದು ಅಧಿಕಾರ ಇರಲಿ ಇಲ್ಲದಿರಲಿ ಇಂತಹ ಕರೋನಾ ಸಂಕಷ್ಟದ ಸಮಯದಲ್ಲಿ ಕೂಡಾ ಜನಸಾಮನ್ಯರ ಕಷ್ಟದಲ್ಲಿ ಭಾಗಿಯಾಗಬೇಕೆಂದು ಹೇಳಿದ ಅವರು ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ಕುಡಚಿ, ರಾಯಬಾಗ ವಿಧಾನ ಸಭೆಯ ವ್ಯಾಪ್ತಿಯ ಗ್ರಾಮದ ಜನರಿಗೆ ಈಗಾಗಲೇ ಸುಮಾರು 25 ಸಾವಿರ ಕೀಟ್‌ಗಳನ್ನು ನೀಡಿದ್ದೇವೆ ಅಲ್ಲದೆ ಹಾರೂಗೇರಿಯಲ್ಲಿ ಕಷ್ಟದಲ್ಲಿರುವವರಿಗಾಗಿ ಮೂರು ಸಹಾಯವಾಣಿ ಕೇಂದ್ರಗಳನ್ನು ತೆರೆದಿದ್ದೇವೆ ಕಷ್ಟ ಅಂತಹ ಯಾರೇ ಬಂದರು ಕೂಡಾ ನಮ್ಮ ಪ್ರತಿಷ್ಠಾನದ ವತಿಯಿಂದ ಸಹಾಯ ಸಹಕಾರ ಮಾಡಲಾಗುವುದೆಂದು ಮಹೇಶ ತಮ್ಮನ್ನವರ ಹೇಳಿದರು.
ಕಾಂಗ್ರೇಸ್ ಪಕ್ಷದ ಮುಖಂಡರಾದ ಮಹಾವೀರ ಮೊಹಿತೆ, ಧೂಳಗೌಡ ಪಾಟೀಲ ಅವರು ಮಾತನಾಡಿ ಇಂತಹ ಮಾಹಾಮಾರಿ ಕರೋನಾ ಲಾಕಡೌನ ಸಮಯದಲ್ಲಿ ಯುವಧುರೀಣ ಮಹೇಶ ತಮ್ಮನ್ನವರ ಅವರು ಕಷ್ಟದಲ್ಲಿರುವ ಸಾವಿರಾರು ಜನರಿಗೆ ಸ್ಪಂಧಿಸಿ ಸಹಾಯ ಸಹಕಾರ ಮಾಡುತ್ತಿರುವ ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ತಳವಾರ, ನ್ಯಾಯವಾಧಿಗಳಾದ ರಾಜು ಶಿರಗಾಂವೆ, ಬಿ.ಎನ್.ಬಂಡಗಾರ, ದಿಲೀಪ ಜಮಾದರ, ಸುಭಾಷ ಕೋಠಿವಾಲೆ, ಅರ್ಜುನ ಬಂಡಗಾರ, ಮುರಗೇಶ ಕೊಠಿವಾಲೆ, ರಾಜು ಕುರಿ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು
Share
WhatsApp
Follow by Email