ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದ ಕರೋನಾ ವಾರಿರ‍್ಸ್ಗೆ ಅಭಿನಂದನೆ

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದ ಕರೋನಾ ವಾರಿರ‍್ಸ್ಗೆ ಅಭಿನಂದನೆ

ಮುಗಳಖೋಡ: ಕರೋನಾ ಮಹಾಮಾರಿ ರೋಗ ಹರಡಿದ್ದ ಹಿನ್ನೆಲೆ, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು, ಜನರಲ್ಲಿ ಜಾಗೃತಿ ಮೂಡಿಸಲು ಹಗಲಿರುಳು, ಬಿಸಿಲು, ಹಸಿವನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಛತ್ರಿಗಳನ್ನು ನೀಡುವುದರ ಮೂಲಕ ಹಾರೂಗೇರಿ ಪಟ್ಟನದಲ್ಲಿ ಬಿಜೆಪಿ ಮುಖಂಡ ಬಸನಗೌಡ ಆಸಂಗಿಯವರ ನೇತೃತ್ವದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಆರ್.ಎ. ಧಾಮನ್ನವರ, ವಿ.ಸಿ. ಹಿರೇಗೌಡರ್, ಎಸ್. ಎಲ್. ಕಟ್ಟಿ ಉಪಸ್ಥಿತರಿದ್ದರು. ಒಟ್ಟು ರಾಯಬಾಗ ಮತಕ್ಷೇತ್ರದ 264 ಹಾಗೂ ಕುಡಚಿ ಮತಕ್ಷೇತ್ರದ 171 ಕಾರ್ಯಕರ್ತರಿಗೆ ಅಭಿನಂದಿಸಲಾಯಿತು.
Share