ಚನ್ನಮ್ಮ ಕಿತ್ತೂರಿನಲ್ಲಿ ಅನಧಿಕೃತವಾಗಿ ಬೀಜ ಕ್ರಿಮಿನಾಶಕ ಮರಾಟ ಮಾಡುತ್ತಿದ್ದ ಅಂಗಡಿಯನ್ನು ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಕೋಳೇಕರ ನೇತೃತ್ವದಲ್ಲಿ ಸಿಜ್ ಮಾಡಿದ ಅಧಿಕಾರಿಗಳು.

ಚನ್ನಮ್ಮ ಕಿತ್ತೂರಿನಲ್ಲಿ ಅನಧಿಕೃತವಾಗಿ ಬೀಜ ಕ್ರಿಮಿನಾಶಕ ಮರಾಟ ಮಾಡುತ್ತಿದ್ದ ಅಂಗಡಿಯನ್ನು ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಕೋಳೇಕರ ನೇತೃತ್ವದಲ್ಲಿ ಸಿಜ್ ಮಾಡಿದ ಅಧಿಕಾರಿಗಳು.

ಚನ್ನಮ್ಮನ ಕಿತ್ತೂರು : ಕಳಪೆ ಬೀಜ, ಕ್ರೀಮಿನಾಶಕ, ಗೊಬ್ಬರ, ಕೃಷಿ ಪರಿಕರಗಳನ್ನು ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವದೆಂದು ಬೆಳಗಾವಿ ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಕೋಳೇಕರ ಹೇಳಿದರು.
ಚನ್ನಮ್ಮ ಕಿತ್ತೂರಿನಲ್ಲಿ ಅನಧಿಕೃತವಾಗಿ ಬೀಜ ಕ್ರಿಮಿನಾಶಕ ಮರಾಟ ಮಾಡುತ್ತಿದ್ದ ಅಂಗಡಿಯನ್ನು ಸಿಜ್ ಮಾಡಿ ಮಾತನಾಡಿದ ಅವರು, ರೈತರು ಸಂಕಷ್ಟದಲ್ಲಿದ್ದು ಕಳಪೆ ಕೃಷಿ ಸಾಮಗ್ರಿಗಳನ್ನು ಖರೀದಿಸಿ ಮೋಸಹೋಗಬಾರದು ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಅಭಿಯಾನ ಪ್ರಾರಂಬಿಸಲಾಗಿದ್ದು, ಈಗಾಗಲೇ 17 ತಂಡಗಳನ್ನು ರಚಿಸಿ ಎಲ್ಲ ಅಂಗಡಿಗಳ ಮೇಲೆ ದಾಳಿ ಮಾಡಿ ಪರೀಕ್ಷಿಸಲಾಗುತ್ತಿದೆ. ಕಿತ್ತೂರಿನಲ್ಲಿ ಪರವಾನಿಗೆ ಪಡೆಯದೆ ಬೀಜ ಕ್ರಿಮಿನಾಶಕ ಮಾರಾಟ ಮಾಡುತ್ತಿದ್ದ ಅಂಗಡಿ, ಪರವಾನಿಗೆ ನವೀಕರಣ ಮಾಡದ ಹಿನ್ನೆಲೆ ಅಂಗಡಿ ಸೇರಿದಂತೆ ಎರಡು ಅಂಗಡಿಗಳನ್ನು ಸೀಜ್ ಮಾಡಲಾಗಿದೆ. ಎಲ್ಲ ಅಂಗಡಿಯವರು ಕಡ್ಡಾಯವಾಗಿ ಬೆಲೆಯ ಮಾಹಿತಿ ಫಲಕ ಅಳವಡಿಸಬೇಕು. ಅಂಗಡಿಯಲ್ಲಿ ಶೇಕರಿಸಿರುವ ಬೀಜ, ಗೊಬ್ಬರ, ಕ್ರಿಮಿನಾಶಕ ಮಾಹಿತಿ ಇಡಬೇಕು, ಗುಣಮಟ್ಟದ ಬೀಜ ಮತ್ತು ಕ್ರೀಮಿನಾಶಕ ಮಾರಾಟ ಮಾರಾಟ ಮಾಡಬೇಕು ಕಳಪೆ ವಸ್ತುಗಳ ಮಾರಾಟ ಕಂಡು ಬಂದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವದೆಂದು ಹೇಳಿದರು.
ಕೃಷಿ ಇಲಾಖೆ ಪರೀವಿಕ್ಷಕ ಪ್ರಭಾಕರ ಇಟ್ನಾಳ, ಕೃಷಿ ಅಧಿಕಾರಿ ಮಂಜುನಾಥ, ಕೆಂಚರಾಹುತ, ಸಹಾಯಕ ಕೃಷಿ ಅಧಿಕಾರಿಗಳಾದ ಎಸ್.ಎಸ್.ಹಂಚಿನಮನಿ, ಎಸ್.ಇ. ನಿಂಬಲಗುoದಿ ಇತರರು ಇದ್ದರು
Share