ಬ್ರೇಕಿಂಗ್ ನ್ಯೂಸ್

ರವಿವಾರ ಕಂಪ್ಲೀಟ ಲಾಕ್‌ಡೌನ್ ಬನಹಟ್ಟಿ ರಸ್ತೆಗಳು ಸಂಪೂರ್ಣ ಸ್ತಬ್ಧ

ರಬಕವಿ-ಬನಹಟ್ಟಿ : ಕೋವಿಡ 19 ನಿಯಂತ್ರಿಸಲು ರಾಜ್ಯ ಸರ್ಕಾರ ಪ್ರತಿ ರವಿವಾರ ಲಾಕ್‌ಡೌನ್ ನೀಡಿದ ಆದೇಶದಂತೆ ಬನಹಟ್ಟಿಯ ಎಲ್ಲ ರಸ್ತೆಗಳು ರವಿವಾರ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಈಗ ತಾನೆ ಕೇಂದ್ರ ಸರ್ಕಾರ ನೀಡಿರುವ ಲಾಕ್‌ಡೌನ್ ಆದೇಶದಂತೆ ಒಂದು, ಎರಡು ಮತ್ತು ಮೂರು ಲಾಕ್‌ಡೌನ್ ಮುಗಿಸಿ 4ನೇ ಲಾಕ್‌ಡೌನ್ ಶುರುವಾತಿಗೆ ಜನರ ಮತ್ತು ದಿನಕೂಲಿಕಾರರ ಕಷ್ಟಗಳನ್ನು ಅರಿತುಕೊಂಡ ವ್ಯಾಪಾರ ವಹಿವಾಟ ಮಾಡಲು ಸ್ವಲ್ಪ ಅನುಮತಿ ನೀಡಿ ಲಾಕ್‌ಡೌನ್ ಸಡಿಲಗೋಳಿಸುವಷ್ಟರಲ್ಲಿ ಮತ್ತೆ ರಾಜ್ಯ ಸರ್ಕಾರ ಪ್ರತಿ ರವಿವಾರ ಕಂಪ್ಲೀಟ ಲಾಕ್‌ಡೌನ್ ಆದೇಶ ಮಾಡಿತ್ತು. ಆದ ಕಾರಣ ರವಿವಾರ ಬನಹಟ್ಟಿಯ ರಸ್ತೆಗಳು ಅಂಗಡಿ ಮುಂಗಟ್ಟುಗಳು ಬಂದ ಆಗಿದ್ದರಿಂದ ಬಿಕೊ ಎನ್ನುತ್ತಿದ್ದವು.
ಸೋಮವಾರದಿಂದ ಶನಿವಾರದ ವರೆಗೆ ಎಲ್ಲ ವ್ಯಾಪಾರ ವಹಿವಾಟುಗಳು ನಡೆದರು ಮೊದಲಿನಂತೆ ವ್ಯಾಪಾರ ಇಲ್ಲವಾರೂ ಸಾಧಾರಣ ಪ್ರಮಾಣ ನಡೆದಿದೆ ಎಂದು ಎಲ್ಲ ವ್ಯಾಪಾರಸ್ಥರ ಮಾತು, ಹೀಗಿದ್ದಾಗ ರವಿವಾರದ ಲಾಕ್‌ಡೌನ್ ಜನರಲ್ಲಿ ಬೆಸರ ತಂದಿಲ್ಲ ಎಂದು ಊಹಿಸಬಹುದಾಗಿದೆ.

About the author

admin