ಅಶೋಕ ಪಾಗಾದ ನಿವೃತ್ತಿ,  ಪುರಸಭೆ ಸಿಬ್ಬಂದಿಗಳಿಂದ, ಸ್ನೇಹಿತರ ಬಳಗದಿಂದ ಸತ್ಕರಿಸಿ ಬಿಳ್ಕೋಡುಗೆ

ಅಶೋಕ ಪಾಗಾದ ನಿವೃತ್ತಿ, ಪುರಸಭೆ ಸಿಬ್ಬಂದಿಗಳಿಂದ, ಸ್ನೇಹಿತರ ಬಳಗದಿಂದ ಸತ್ಕರಿಸಿ ಬಿಳ್ಕೋಡುಗೆ

ಬೈಲಹೊಂಗಲ : ಮಾತೃ ಹೃದಯದಿಂದ ಎಲ್ಲರ ಜತೆಗೂಡಿ ಅಶೋಕ ಪಾಗಾದ ಅವರು ಕೆಲಸ ನಿರ್ವಹಿಸುತ್ತಿದ್ದರು. ಸಾಕಷ್ಟು ಕಷ್ಟ, ನಷ್ಟ, ತೊಂದರೆ ಬಂದರೂ ಯಾವುದನ್ನೂ ಲೆಕ್ಕಿಸಿದೆ ತಮ್ಮ ಕರ್ತವ್ಯ ನಿಷ್ಠೆ ಮರೆಯುತ್ತಿರಲಿಲ್ಲವೆಂದು ವರ್ಗಾವಣೆಗೊಂಡ ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಕರವಸೂಲಿ ಸಹಾಯಕರಾಗಿದ್ದ ಅಶೋಕ ಉಳಪ್ಪ ಪಾಗಾದ ಅವರ ನಿವೃತ್ತಿಯಾದ ನಿಮಿತ್ತ ಸ್ನೇಹಿತರ ಬಳಗ ಹಾಗೂ ಪುರಸಭೆ ಸಿಬ್ಬಂದಿಗಳಿAದ ಸತ್ಕರಿಸಿ ಬೀಳ್ಕೂಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಟ್ಟಣದ ಜನರಿಗೆ ಚಿರಪರಿಚಿತರಾಗಿದ್ದ ಇವರು ಎಲ್ಲರೊಡೆನೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು. ಪಾಗಾದ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ನೂತನ ಮುಖ್ಯಾಧಿಕಾರಿ ಕೆ.ಆಯ್.ನಾಗನೂರ ಮಾತನಾಡಿ, ಅಶೋಕ ಪಾಗಾದ ಅವರು ಒಳ್ಳೆಯ ಕೆಲಸ ನಿರ್ವಹಿಸಿರುವುದು ಶ್ಲಾಘನೀಯ. ಪ್ರತಿಯೊಬ್ಬರು ಸರಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಪ್ರಾಮಾಣಿಕತೆ, ನಿಷ್ಠೆಯಿಂದ ಜನರ ಸೇವೆ ಮಾಡಬೇಕೆಂದರು. ಅಶೋಕ ಪಾಗಾದ ಸತ್ಕಾರ ಸ್ವೀಕರಿಸಿ ಮಾತನಾಡಿ, ಪುರಸಭೆಯಲ್ಲಿ ಕರ ವಸೂಲಿ ಸಹಾಯಕರಾಗಿ ಕೆಲಸ ನಿರ್ವಹಿಸಿರುವುದು ತೃಪ್ತಿ ತಂದಿದೆ. ನಾಡಿನ ಜನಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು, ಸದಸ್ಯರು, ಸಿಬ್ಬಂದಿ, ನಾಗರಿಕರು ಉತ್ತಮ ಸಹಕಾರ ನೀಡಿದ್ದಾರೆ. ಸಾಕಷ್ಟು ತೊಂದರೆಗಳು ಬಂದರೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ್ದೇನೆ. ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಅವರ ಜೊತೆ ಕೆಲಸ ನಿರ್ವಹಿಸಿರುವುದು ಖುಷಿ ತಂದಿದೆ. ಒಳ್ಳೆಯ ಮನಸ್ಸು, ಪ್ರಾಮಾಣಿಕ ಸೇವೆ ನೀಡುತ್ತಿದ್ದ ಅವರು ಎಲ್ಲರನೂ ಪ್ರೀತಿ, ವಿಶ್ವಾಸದಿಂದ ಸಹಾಯ-ಸಹಕಾರ ಮಾಡುತ್ತಿದ್ದರು ಎಂದರು. ಇದೇ ವೇಳೆ ಸ್ನೇಹಿತರ ಬಳಗ ಹಾಗೂ ಪುರಸಭೆ ಸಿಬ್ಬಂದಿಗಳು ಅಶೋಕ ಪಾಗಾದ ದಂಪತಿಗಳನ್ನು ಸತ್ಕರಿಸಿದರು. ಮಾಜಿ ಮುಖ್ಯಾಧಿಕಾರಿ ಆಯ್.ಬಿ.ಬಗನಾಳ, ರಮೇಶ ಹಿಟ್ಟಣಗಿ, ಸತೀಶ ಕಜ್ಜಿಡೋಣಿ, ಇಂಜಿನೀಯರಗಳಾದ ಎಸ್.ಬಿ.ಪಾಟೀಲ, ಪತ್ತಾರ, ಸತೀಶ ಕಜ್ಜಿಡೋನಿ, ಉಮಾ ಬೆಟಗೇರಿ, ಎಸ್.ಎಸ್.ನರಗುಂದ, ಪುರಸಭೆ ಸದಸ್ಯ ಉಳವಪ್ಪ ಬಡ್ಡಿಮನಿ, ಪಿ.ಜಿ.ಅರಕಸಾಲಿ, ಡಿ.ಎಂ.ಕಲೀಫ, ಬಿ.ಆಯ್.ಗುಡಿಮನಿ, ಕುಟ್ರೆ ಹಾಗೂ ಸಿಬ್ಬಂದಿಗಳು, ಸ್ನೇಹಿತರ ಬಳಗದವರು ಉಪಸ್ಥಿತರಿದ್ದರು.
Share
WhatsApp
Follow by Email