ರಾಜ್ಯದ ಆರು ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದ ಆರು ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಜಾರಿಯಾಗಿರುವ ಲಾಕ್ ಡೌನ್ ನಡುವೆಯೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ  ಒಟ್ಟು 6 ಹಿರಿಯ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕೊರೊನಾ ಎರಡನೇ ನಿಯಂತ್ರಿಸಲು ಜಾರಿಯಾಗಿರುವ ಲಾಕ್ ಡೌನ್ ನಡುವೆಯೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 6 ಹಿರಿಯ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅವರನ್ನು ಬೆಂಗಳೂರಿನ ಕಾರಾಗೃಹ ಇಲಾಖೆಯ ಐಜಿಪಿ ಆಗಿ ನೇಮಕ ಮಾಡಲಾಗಿದೆ. ಕಲಬುರಗಿ ಈಶಾನ್ಯ ವಲಯದ ಐಡಿಜಿಪಿ ಮನೀಶ್ ಖರ್ಬಿಕರ್ ಅವರನ್ನು ಬಳ್ಳಾರಿ ವಲಯದ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಆಡಳಿತ ವಿಭಾಗದ ಐಜಿಪಿ ಆಗಿದ್ದ ಕೆ ವಿ ಶರತ್ ಚಂದ್ರ ಅವರನ್ನು ಸಿಐಡಿ ಅರಣ್ಯ ಘಟಕದ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ರಾಘವೇಂದ್ರ ಸುಹಾಸ್ ಅವರನ್ನು ಬೆಳಗಾವಿಯ ನಾರ್ಥೆರೆನ್ ವಿಭಾಗದ ಐಜಿಪಿ ಸ್ಧಾನದಿಂದ ಬೆಂಗಳೂರಿನ ಆಂತರಿಕ ಭದ್ರತೆಯ ಐಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಎನ್ ಸತೀಶ್ ಕುಮಾರ್ ಅವರನ್ನು ಕಲಬುರಗಿ ನಗರ ಐಜಿಪಿ ಸ್ಥಾನದಿಂದ ಬೆಳಗಾವಿ ವಿಭಾದ ಐಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಇನ್ನು, ವೈ ಎಸ್ ರವಿ ಕುಮಾರ್ ಅವರನ್ನು ನೇಮಕಾತಿ ವಿಭಾಗದ ಡಿಐಜಿಪಿ ಸ್ಥಾನದಿಂದ ಕಲಬುರಗಿ ನಗರ ವ್ಯಾಪ್ತಿಯ ಡಿಐಜಿ ಹಾಗೂ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಿದೆ.

Share